ಓಡುವ ಕಾಂಗರೂಗಳ ಸೊಂಟ ಮುರಿದ ಕುಂಬ್ಳೆ
ಮೆಲ್ಬೋರ್ನ್ , ಡಿ. 26 : ಭಾರತ ಮತ್ತು ಆಸ್ಟ್ರೇಲಿಯ ನಡುವೆ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕುತೂಹಲ ಮತ್ತು ರೋಚಕತೆಯನ್ನು ಮೈಗೂಡಿಸಿಕೊಂಡಿತ್ತು. ಮೊದಲ ದಿನದಾಟ ಮುಗಿದಾಗ ಆಸ್ಟ್ರೇಲಿಯ 337 ರನ್ನುಗಳಿಗೆ 9 ವಿಕೆಟ್ ಕಳೆದುಕೊಂಡಿದೆ.
ಆರಂಭ ಆಟಗಾರರು ಯದ್ವತದ್ವಾ ರನ್ನು ಹೊಡೆಯುವುದಕ್ಕೆ ಶುರುವಿಟ್ಟುಕೊಂಡರು. ದೈತ್ಯ ಹೇಡೆನ್ (128) ಸೆಂಚುರಿ ಬಾರಿಸಿದರೆ ಜಾಕ್ವಿಸ್ 66 ಬಾರಿಸಿದರು. ಈ ಮೂಲಕ ಹೇಡೆನ್ ಅವರ ಸೆಂಚುರಿ 28 ಆಯಿತು. ತೆಂಡುಲ್ಕರ್ (37). ಮೊದಲ ವಿಕೆಟ್ಟಿಗೇ 135 ರನ್ ಪೇರಿಸಿ ಭಾರತದ ಬೌಲಿಂಗ್ ಮೊನಚು ಕಳೆದುಕೊಂಡಿದೆ ಎಂಬ ಭಾವನೆ ಮೂಡುವಂತೆ ಮಾಡಿದ್ದರು ಆರಂಭಿಕ ಆಟಗಾರರಾದ ಹೇಡನ್ ಮತ್ತು ಜಾಕ್ವಿಸ್. ನಂತರ ಆದದ್ದೇ ಬೇರೆ.
ಹಸಿವಾಗಿತ್ತು ಎಂದು ಕಾಣಿಸುತ್ತದೆ. ಊಟ ಆದನಂತರ ಕುಂಬ್ಲೆ ಮತ್ತು ಜಹೀರ್ ಖಾನ್ ದಾಳಿಗೆ ಕಾಂಗರೂಗಳು ತತ್ತರಿಸತೊಡಗಿದರು. ಪಾಂಟಿಂಗ್ ತೀರ ಕಳಪೆ ಆಗಿ ಆಡಿ ಬೇಗ ಪೆವಿಲಿಯನ್‌ಗೆ ಹೋದರು. ಅನಿಲ್ ಕುಂಬ್ಳೆ( 5/84) ಮತ್ತು ಜಹೀರ್ (3/39) ಯಶಸ್ವಿ ಬೌಲರ್‌ಗಳೆನಿಸಿಕೊಂಡಿದ್ದಾರೆ. ಆಟ ಕುತೂಹಲಕರ ಘಟ್ಟದಲ್ಲಿ ನಿಂತಿದೆ. ನಾಳೆ ನೋಡುವಾ.
(ದಟ್ಸ್ ಕ್ರಿಕೆಟ್ ಡಾಟ್ ಕಾಂ)












Click it and Unblock the Notifications