ಏಸುಕ್ರಿಸ್ತನ ಜನುಮದಿನ ಮೋದಿ ಪ್ರಮಾಣ

ಗಾಂಧಿನಗರ್, ಡಿ.24 : ಸತತ 3ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ (57) ಮಂಗಳವಾರ (ಡಿ.25) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಗಾಂಧಿನಗರದ ಸರ್ದಾರ್ ಪಟೇಲ್ ಮೈದಾನದಲ್ಲಿ ಮಂಗಳವಾರ 12.50ಕ್ಕೆ ರಾಜ್ಯಪಾಲ ನವಲ್ ಕಿಶೋರ್ ಶರ್ಮ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಈ ಮುಂಚೆ ಡಿ.27ಕ್ಕೆ ಪ್ರಮಾಣ ವಚನ ಸೀಕರಿಸುವುದಾಗಿ ಪ್ರಕಟಿಸಲಾಗಿತ್ತು. ಮಂಗಳವಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನುಮದಿನ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳು ಏಕಕಾಲದಲ್ಲಿ ನಡೆಯಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಅವರನ್ನು ಒಳಗೊಂಡಂತೆ ಬಿಜೆಪಿಯ ಎಲ್ಲಾ 117 ಶಾಸಕರೂ ಗಾಂಧಿನಗರದ ಟೌನ್ ಹಾಲ್ ಬಳಿ ಸಭೆ ಸೇರಿ. ಶಿಷ್ಟಾಚಾರದಂತೆ ಹೊಸದಾಗಿ ಚುನಾಯಿತರಾದ ಬಿಜೆಪಿ ಶಾಸಕರು ಮೋದಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಚುನಾಯಿಸಲಿದ್ದಾರೆ. ಹಾಗೆಯೇ ಶಿಷ್ಟಾಚಾರದಂತೆ ರಾಜ್ಯಪಾಲರನ್ನು ಆಹ್ವಾನಿಸಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ತಾವು ಆಯ್ಕೆಯಾಗಿರುವುದನ್ನು ಅವರು ಶ್ರುತಪಡಿಸಲಿದ್ದಾರೆ.

(ದಟ್ಸ್‌ಕನ್ನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+