ಹೈಪರ್ ಮಾರ್ಕೆಟ್ ಕ್ಷೇತ್ರಕ್ಕೆ ಟಾಟಾ ಪಾದಾರ್ಪಣೆ
ಬೆಂಗಳೂರು, ಡಿ.21 : ನಗರದಲ್ಲಿ 'ಸ್ಟಾರ್ ಬಜಾರ'ನ್ನು ತೆರೆಯುವ ಮೂಲಕ ಹೈಪರ್ ಮಾರ್ಕೆಟ್ ಕ್ಷೇತ್ರಕ್ಕೆ ಟಾಟಾ ಗ್ರೂಪ್‌ನ ಟ್ರೆಂಟ್ ಪಾದಾರ್ಪಣೆ ಮಾಡಿದೆ.
ಪ್ರಥಮ 'ಸ್ಟಾರ್ ಬಜಾರ್'ನ್ನು ಬೆಂಗಳೂರಿನಲ್ಲಿ ತೆರೆಯುತ್ತಿರುವುದು ನಮಗೆ ಸಂತೋಷವಾಗುತ್ತಿದೆ ಎಂದು ಮಳಿಗೆಯನ್ನು ಉದ್ಘಾಟಿಸಿದ ಕಂಪನಿಯ ಮಾರುಕಟ್ಟೆ ಮುಖ್ಯಸ್ಥೆ ನೀತಿ ಚೋಪ್ರ ಶುಕ್ರವಾರ ತಿಳಿಸಿದ್ದರು.
ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ದಿನಸಿಯಿಂದ ಹಿಡಿದು ದಿರಿಸಿನ ತನಕ ಒಂದೇ ಸೂರಿನಡಿ ದೊರೆಯುವಂತೆ ಮಾಡಲಾಗಿದೆ. ಇಲ್ಲಿ ಖರೀದಿಸುವುದರಿಂದ ಒಂದು ಅದ್ವಿತೀಯ ಅನುಭವ ನಿಮ್ಮದಾಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
75 ಸಾವಿರ ಚದರಡಿಗೂ ಅಧಿಕ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನಲ್ಲಿ 'ಸ್ಟಾರ್ ಬಜಾರ'ನ್ನು ಸ್ಥಾಪಿಸಲಾಗಿದೆ. ಮನೆಗೆ ಬೇಕಾದ ಸರಕುಸರಂಜಾಮುಗಳಿಂದ ಹಿಡಿದು, ವೈಯಕ್ತಿಯ ಉತ್ಪನ್ನಗಳು, ಆಹಾರ ಪದಾರ್ಥಗಳು, ಪಾನೀಯಗಳು, ತಾಜಾ ಹಣ್ಣು ಮತ್ತು ತರಕಾರಿಗಳು ಮಳಿಗೆಯಲ್ಲಿ ಲಭ್ಯವಾಗಲಿವೆ. ಈ ರೀತಿಯ ಮಳಿಗೆಗಳನ್ನು ದೇಶದ ಇತರ ನಗರಗಳಲ್ಲೂ ಸ್ಥಾಪಿಸುವುದಾಗಿ ಚೋಪ್ರಾ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
(ಯುಎನ್‌ಐ)












Click it and Unblock the Notifications