ಪ್ರಗತಿಪರ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ

ಪ್ರಗತಿಪರ ತೆಂಗು ಬೆಳೆಗಾರರಿಗೆ ರಾಷ್ಟ್ರೀಯ ಪ್ರಶಸ್ತಿಬೆಂಗಳೂರು, ಡಿ.20 : ತೆಂಗಿನ ಉದ್ಯಮದಲ್ಲಿ ತೊಡಗಿರುವವರನ್ನು ಉತ್ತೇಜಿಸಲು ಹಾಗೂ ತೆಂಗು ಉದ್ಯಮವನ್ನು ಪ್ರೋತ್ಸಾಹಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ತೆಂಗು ಅಭಿವೃದ್ಧಿ ಮಂಡಳಿಯು ಪ್ರಗತಿಪರ ತೆಂಗು ಬೆಳೆಗಾರರು ಮತ್ತು ತೆಂಗು ಉದ್ಯಮದಲ್ಲಿ ತೊಡಗಿರುವ ವ್ಯಕ್ತಿ ಹಾಗೂ ಸಂಘ - ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಯೋಜನೆಯಡಿಯಲ್ಲಿ ಅತ್ಯುತ್ತಮ ತೆಂಗು ಬೆಳೆಗಾರರಿಗೆ, ಅತ್ಯುತ್ತಮ ತೆಂಗು ಸಂಸ್ಕರಣಾಗಾರರಿಗೆ, ಅತ್ಯುತ್ತಮ ತೆಂಗು ಸಂಶೋಧಕರಿಗೆ, ಅತ್ಯುತ್ತಮ ತೆಂಗು ರಫ್ತುದಾರರಿಗೆ, ಅತ್ಯುತ್ತಮ ತೆಂಗು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರಿಗೆ, ಅತ್ಯುತ್ತಮ ತೆಂಗು ಉತ್ಪಾದನೆಯಲ್ಲಿ ತೊಡಗಿರುವವರಿಗೆ ಹಾಗೂ ತೆಂಗು ಅಭಿವೃದ್ಧಿಯಲ್ಲಿ ತೊಡಗಿರುವ ಅತ್ಯುತ್ತಮ ಸಹಕಾರ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ತಲಾ 25.000 ರೂ ನಗದು ಬಹುಮಾನ ಒಳಗೊಂಡ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು.

ಅರ್ಹ ಹಾಗೂ ಆಸಕ್ತ ಪ್ರಗತಿಪರ ತೆಂಗು ಬೆಳೆಗಾರರು ಮತ್ತು ತೆಂಗು ಉದ್ಯಮದಲ್ಲಿ ತೊಡಗಿರುವ ವ್ಯಕ್ತಿ ಹಾಗೂ ಸಂಘ - ಸಂಸ್ಥೆಗಳು ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗಾಗಿ ತೋಟಗಾರಿಕಾ ಇಲಾಖೆಯ ಬೆಂಗಳೂರು ಜಿಲ್ಲಾ ಉಪ ನಿರ್ದೇಶಕರನ್ನು ದೂರವಾಣಿ ಸಂಖ್ಯೆ : 2286 0640 ಕೆಂಗೇರಿಯಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರನ್ನು ದೂರವಾಣಿ ಸಂಖ್ಯೆ 2848 6144, ಯಲಹಂಕದಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರನ್ನು 2856 6740 ಹಾಗೂ ಆನೇಕಲ್‌ನಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರನ್ನು ದೂರವಾಣಿ ಸಂಖ್ಯೆ :7840454 ಮೂಲಕ ಸಂಪರ್ಕಿಸಬಹುದು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+