ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕಳ್ಳರನ್ನು ಹಿಡಿದ ಪೊಲೀಸರು!
ಬೆಂಗಳೂರು, ಡಿ.20 : 23 ಲಕ್ಷ ದೋಚಿದ ಕಳ್ಳರನ್ನು 24 ಗಂಟೆಗಳಲ್ಲಿ ಹಿಡಿದ ನಗರದ ಪೊಲೀಸರು 22 ಲಕ್ಷ ರುಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆಕ್ಟ್ಸ್ ಮಿನಿಸ್ಟರೀಸ್ ಕ್ರಿಶ್ಚಿಯನ್ ಟ್ರಸ್ಟ್‌ನ್ನು ಹೊಕ್ಕು 23 ಲಕ್ಷ ರು.ಗಳನ್ನು ಮಂಗಳವಾರ ದೋಚಿದ್ದ ನಾಲ್ವರು ಈಗ ಕ್ರೈಂ ಬ್ರಾಂಚ್ ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತರಾದವರು ಮಂಜುನಾಥ್, ರವಿ, ಪ್ರಸನ್ನ ಮತ್ತು ರಾಜು.
ಮಂಜುನಾಥ್ ಮತ್ತು ರವಿ ಕ್ರಿಶ್ಚಿಯನ್ ಟ್ರಸ್ಟ್‌ನ ನೌಕರರಾಗಿದ್ದು ಉಳಿದಿಬ್ಬರೊಡಗೂಡಿ ಹಣವನ್ನು ಲಪಟಾಯಿಸುವ ಸಂಚನ್ನು ಹೂಡಿದ್ದರು. ಟ್ರಸ್ಟ್‌ನ ನೌಕರರಿಗೆ ಸಂಬಳ ನೀಡಲೆಂದು 23 ಲಕ್ಷ ರು. ಹಣವನ್ನು ತೆಗೆದಿಡಲಾಗಿತ್ತು.
ಕಳ್ಳತನ ಗಮನಕ್ಕೆ ಬಂದ ಕೂಡಲೇ ಕ್ರಿಶ್ಚಿಯನ್ ಟ್ರಸ್ಟ್ ಪೊಲೀಸರಿಗೆ ಬುಧವಾರ ಬೆಳಿಗ್ಗೆ ದೂರು ನೀಡಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ನಡೆಸಿದಾಗ ಮಂಜುನಾಥ್ ಮತ್ತು ರವಿ ಕಳ್ಳತನ ನಡೆಸಿರುವುದು ತಿಳಿದುಬಂದಿತು. ನಾಲ್ವರಿಂದ 22 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.
(ಯುಎನ್ಐ)












Click it and Unblock the Notifications