ಸಹೋದರ ಕೊಂದಿದ್ದ ಪ್ರವೀಣ್ ಮಹಾಜನ್‌ಗೆ ಜೀವಾವಧಿ ಶಿಕ್ಷೆ
ಮುಂಬೈ, ಡಿ.18 : ನಿರೀಕ್ಷಿಸಿದಂತೆಯೇ ಪ್ರವೀಣ್ ಮಹಾಜನ್‌ಗೆ (48) ಜೀವಾವಧಿ ಶಿಕ್ಷೆ ಜಾರಿಯಾಗಿದೆ. ಸೋಮವಾರ (ಡಿ.17) ತಪ್ಪಿತಸ್ತ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಇಂದು(ಡಿ.18) ವಿಶೇಷ ದಂಡಾಧಿಕಾರಿಗಳಾದ ಉಜ್ವಲ್ ನಿಕಂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಏ.22, 2006ರ ಮುಂಜಾನೆ ವೊರ್ಲಿಯಲ್ಲಿರುವ ಪ್ರಮೋದ್ ಮಹಾಜನ್ ಅವರ ಮನೆಗೆ ಹೋದ ಪ್ರವೀಣ್, ಪರವಾನಗಿ ಹೊಂದಿದ್ದ ರಿವಾಲ್ವರ್‌ನಿಂದ ಮೂರು ಬಾರಿ ಗುಂಡು ಹಾರಿಸಿದ್ದ. 12 ದಿನಗಳ ಸಾವುಬದುಕಿನ ಹೋರಾಟದ ನಂತರ ಪ್ರಮೋದ್ ಮಹಾಜನ್ ಮೃತಪಟ್ಟಿದ್ದರು.
ವಾದವಿವಾದಗಳನ್ನು ಆಲಿಸಿದ ನ್ಯಾಯಾಲಯ ಪ್ರವೀಣ್ ಮಹಾಜನ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. 'ನನ್ನ ತಪ್ಪೇನೂ ಇಲ್ಲ, ಆದರೂ ಪ್ರವೀಣ್ ನನ್ನ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ' ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಸಾವಿಗೂ ಮುಂಚೆ ಪ್ರಮೋದ್ ಮಹಾಜನ್‌ರ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸಿ ಈ ಶಿಕ್ಷೆ ವಿಧಿಸಿದೆ.
(ಏಜನ್ಸೀಸ್)
ಪ್ರವೀಣ್ ಮಹಾಜನ್ ಅಪರಾಧಿ : ಮುಂಬೈ ನ್ಯಾಯಾಲಯ












Click it and Unblock the Notifications