ಶಿವಮೊಗ್ಗ : ಜನವರಿ5ರಿಂದ ಐತಿಹಾಸಿಕ ಕೆಳದಿ ಉತ್ಸವ
ಶಿವಮೊಗ್ಗ, ಡಿ.14 : ಸಾಗರ ತಾಲೂಕಿನ ಕೆಳದಿಯಲ್ಲಿ ಇತಿಹಾಸ ಪ್ರಸಿದ್ಧ ಕೆಳದಿ ಉತ್ಸವವು ಜ.5ರಿಂದ ಪ್ರಾರಂಭವಾಗಲಿದೆ. ಉತ್ಸವ ನಡೆಸಲು ತಾಲೂಕು ಇತಿಹಾಸ ವೇದಿಕೆ ಹಾಗೂ ಕೆಳದಿ ಗ್ರಾಮ ಪಂಚಾಯತಿಗಳು ರಾಮೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿವೆ.
ರಾಜಗುರು ಹಿರೇಮಠದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳೂ ಸಭೆಯಲ್ಲಿ ಭಾಗವಹಿಸಿದ್ದರು. ಉತ್ಸವವು 250ವರ್ಷಗಳಷ್ಟು ಕಾಲ ಆಳಿದ ಕೆಳದಿ ರಾಜವಂಶಸ್ಥರ ವೈಭವವನ್ನು ನೆನಪಿಸಲಿದೆ. ಈ ಉತ್ಸವವನ್ನು ವಿಜೃಂಭಣೆಯಿಂದ ನಡೆಸುತ್ತಿರುವ ತಾಲೂಕು ಇತಿಹಾಸ ವೇದಿಕೆಯನ್ನು ಪ್ರಶಂಸಿಸಿದರು.
ಕೆಳದಿ ಉತ್ಸವವನ್ನು ವೈಭವೋಪೇತವಾಗಿ ನಡೆಸಲಾಗುವುದೆಂದು. ಉತ್ಸವಕ್ಕೆ ಅಗತ್ಯವಾದ ಆರ್ಥಿಕ ಸಹಾಯವನ್ನು ಮನೆಮನೆಗೂ ಹೋಗಿ ಸಂಗ್ರಹಿಸಲಾಗುವುದು. ಮಠದ ವತಿಯಿಂದ 51,000 ರೂ. ಕೊಡಲಾಗಿದೆ ಎಂದು ಅವರು ತಿಳಿಸಿದರು.
ಕೆಳದಿ ಇತಿಹಾಸಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ, ಉಪನ್ಯಾಸಮಾಲೆ, ಚರ್ಚೆಗಳನ್ನು ಏರ್ಪಡಿಸಲಾಗಿದೆ. ಉತ್ಸವದಲ್ಲಿ ಇತಿಹಾಸಜ್ಞರು, ಬರಹಗಾರರು ಭಾಗವಹಿಸಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಕಲಾವಿದರು ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ ಎಂದು ಸಾಗರ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ. ಶಂಕರ್ ತಿಳಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications