ಮೀಟರ್ ಬಡ್ಡಿ ಅಲ್ಲಾ ಬ್ಯಾಂಕ್ ಬಡ್ಡಿದರ ಇಳಿಮುಖವಾಗಲಿದೆ!
ಕೊಲ್ಕತ್ತಾ, ಡಿ.14 : ದೇಶದಲ್ಲಿ ಬ್ಯಾಂಕುಗಳ ಬಡ್ಡಿದರ ಇಳಿಮುಖವಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಎಸ್. ಭಟ್ಟಾಚಾರ್ಯ ತಿಳಿಸಿದ್ದಾರೆ.
ಅಲ್ಪಾವಧಿ ಹಾಗೂ ಮಧ್ಯಮಾವಧಿ ಬಡ್ಡಿದರಗಳಲ್ಲಿ ಇಳಿತ ಉಂಟಾಗಲಿದೆ ಎಂದು ಅವರು ಕೊಲ್ಕತ್ತಾದ ವಾಣಿಜ್ಯ ಸಮಾವೇಶದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಬೇಕಾದ ದೀರ್ಘಾವಧಿ ಸಾಲ ನಿಧಿಯೂ ನಿಧಾನಗತಿಯಲ್ಲಿ ಏರುತ್ತಿದೆ. ಆದಾಗ್ಯೂ ಕಾರ್ಪೊರೇಟ್ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವಲಯದಲ್ಲಿ ಸಂಪನ್ಮೂಲಗಳಿಗಾಗಿ ಬೇಡಿಕೆ ಇದೆ. ಅವುಗಳಿಗೆ ದೀರ್ಘಾವಧಿ ಸಾಲ ಕೊಡಲು ನಿಯಮ ನಿಬಂಧನೆಗಳು ಅಡ್ಡಿಯಾಗುತ್ತಿವೆ. ಹಣದುಬ್ಬರವೂ ಬಡ್ಡಿದರ ಇಳಿಮುಖವಾಗಲು ಮತ್ತೊಂದು ಕಾರಣ ಎಂದು ಅವರು ಕಾರಣಗಳನ್ನು ಮುಂದಿಟ್ಟಿದ್ದಾರೆ.
(ಏಜನ್ಸೀಸ್)












Click it and Unblock the Notifications