ಸೋನಿಯಾಗಾಂಧಿಯ ನಕಲಿ ಆಪ್ತ ಕಾರ್ಯದರ್ಶಿ ಬಲೆಗೆ ಬಿದ್ದ!

ಬೆಂಗಳೂರು, ನ.24 : ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ(ಪಿಎಸ್)ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, ಸಮಾಜದ ವಿವಿಧ ಗಣ್ಯರ ವಂಚಿಸಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈ ವಂಚಕನನ್ನು ಚೆನ್ನೈ ನಗರದ ಗುಣಶೇಖರ್ ಪಿಳ್ಳೈ(54) ಎಂದು ಗುರ್ತಿಸಲಾಗಿದೆ. ಇವನ ವಂಚನೆಯನ್ನು ಬಯಲುಗೊಳಿಸಿದ್ದು, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್.

ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಶನಿವಾರ(ನ.24) ತನಿಖೆ ಮುಂದುವರೆಸಿದ್ದಾರೆ. ಸೋನಿಯಾ ಅವರ ಆಪ್ತ ಕಾರ್ಯದರ್ಶಿಯ ಹೆಸರು ಶೇಖರ್ ಪಿಳ್ಳೈ. ಇವರನ್ನು ರೂಪದಲ್ಲಿ ಮತ್ತು ಹೆಸರಿನಲ್ಲಿ ಹೋಲುವ ಗುಣಶೇಖರ್ ಪಿಳ್ನೈ ಎಂಬಾತ ಜನರನ್ನು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಂಚನೆ ಬಯಲಾದದ್ದು ಹೀಗೆ :

ಸಾತನೂರಿನ ವೈದ್ಯ ಡಾ.ಅಪ್ಪಾಜಿ ಗೌಡ ಅವರು ಗುಣಶೇಖರ್ ಪಿಳ್ಳೈನ್ನು ಬೆಂಗಳೂರಿಗೆ ಕರೆಸಿದ್ದರು. ಈತನ ಮುಖಾಂತರ ಸೋನಿಯಾ ಮನವೊಲಿಸಿ, ತಮ್ಮ ಮದ್ಯವ್ಯಸನಿಗಳ ನಿರ್ಮೂಲನಾ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದ ಧನ ಸಹಾಯ ಪಡೆಯಲು ಅವರು ಯೋಚಿಸಿದ್ದರು. ತಮ್ಮ ಸದಾಶಿವನಗರದ ಮನೆಯಲ್ಲಿ ಅಪ್ಪಾಜಿ ಗೌಡರು ಗುಣಶೇಖರ್ ಪಿಳ್ಳೈಗೆ ಆಹ್ವಾನ ನೀಡಿದ್ದರು. ಸೋನಿಯಾ ಅವರ ಆಪ್ತ ಕಾರ್ಯದರ್ಶಿ ಬರುವ ವಿಷಯ ತಿಳಿದು ಅಪ್ಪಾಜಿಗೌಡರ ಆಪ್ತರಾದ ಡಿ.ಕೆ.ಶಿವಕುಮಾರ್ ಅಲ್ಲಿಗೆ ಬಂದಿದ್ದರು.

ಮಾತಿನ ನಡುವೆ ಅನುಮಾನಗೊಂಡ ಡಿ.ಕೆ.ಶಿವಕುಮಾರ್, ದೂರವಾಣಿ ಮುಖಾಂತರ ಸೋನಿಯಾ ಕಚೇರಿ ಸಂಪರ್ಕಿಸಿ ವಿಚಾರಿಸಿದರು. ಆ ಹೆಸರಿನವರು ಯಾರೂ ಸಹಾ ಸೋನಿಯಾ ಅವರಿಗೆ ಆಪ್ತ ಕಾರ್ಯದರ್ಶಿ ಇಲ್ಲ ಎಂಬುದು ಪತ್ತೆಯಾಯಿತು. ಆ ಮೇಲೆ ಗುಣಶೇಖರ್ ಪಿಳ್ಳೈ ಬಂಧನವೂ ಆಯಿತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+