ರೆಡ್ ವಿಸ್ಕಿ ಇದೀಗ ಇಲ್ಲಿಗೂ ಬಂದಿದೆ;ಪಾರ್ಟಿ ಮಾಡೋಣ್ವಾ?
ಬೆಂಗಳೂರು, ನ.24 : ಗುಂಡು ಪ್ರಿಯರಿಗೊಂದು ಖುಷಿ ಸಮಾಚಾರ. ರೆಡ್ ನೈಟ್ ವಿಸ್ಕಿ ಈಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಖೋಡೆ ಇಂಡಿಯಾ ಲಿಮಿಟೆಡ್ ರೆಟ್ ನೈಟ್ ವಿಸ್ಕಿಯನ್ನು ನಗರದಲ್ಲಿ ಬಿಡುಗಡೆ ಮಾಡಿದೆ. ಉದ್ಯಮ ಸಮೂಹದ ವ್ಯವಸ್ಥಾಪಕ ಶ್ರೀಹರಿಖೋಡೆ ಲೋಕಾರ್ಪಣೆ ಕೈಂಕರ್ಯವ ಮುಗಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತ್ಪಾಲ್ ಚೌಧರಿ ಮಾಹಿತಿ ನೀಡಿದರು. ಕಳೆದ ನಾಲ್ಕು ದಶಕಗಳಿಂದ ಉತ್ತರ ಭಾರತದಲ್ಲಿ ಮಾತ್ರ ರೆಡ್ ವಿಸ್ಕಿ ಮಾರಾಟ ನಡೆಯುತ್ತಿತ್ತು. ಈ ವಿಸ್ಕಿ ಜನಪ್ರಿಯಗೊಂಡಿದ್ದು, ಈಗ ಮಾರುಕಟ್ಟೆಯನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸಿದ್ದೇವೆ. ಇಲ್ಲಿನ ಗ್ರಾಹಕರಿಗೆ ಹೊಸ ವಿಸ್ಕಿಯ ರುಚಿ ಇಷ್ಟವಾಗುತ್ತದೆ ಎಂದು ನಂಬಿದ್ದೇವೆ ಎಂದರು.
ಖೋಡೆ ಗ್ರೂಪ್ ವಹಿವಾಟು ಸದ್ಯಕ್ಕೆ 120ಕೋಟಿ ರೂಪಾಯಿ ಇದ್ದು,ಅದನ್ನು ಮುಂದಿನ ಆರ್ಥಿಕವರ್ಷದಲ್ಲಿ ದ್ವಿಗುಣಗೊಳಿಸಲು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ವಿಸ್ಕಿ ಮತ್ತು ಬ್ರಾಂದಿಯನ್ನು ಮಾರುಕಟ್ಟೆಗೆ ಬಿಡಲಿದ್ದೇವೆ ಎಂದು ಚೌಧರಿ ವಿವರಿಸಿದರು.
(ಯುಎನ್ಐ)












Click it and Unblock the Notifications