ಸಿಂಡಿಕೇಟ್ ಬ್ಯಾಂಕಲ್ಲಿ ಸಾಲ ಕೇಳೋದು ಈಗ ಅತಿ ಸುಲಭ!
ಬೆಂಗಳೂರು, ನ.14 : ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಾಲ ಬಯಸುವ ಮಂದಿ, ಬ್ಯಾಂಕ್ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಅಂತರ್ಜಾಲದ ಮುಖಾಂತರವೇ ತಮ್ಮ ಸಾಲದ ಮನವಿಯನ್ನು ಗ್ರಾಹಕರು ಸಲ್ಲಿಸಬಹುದು. ಈ ವಿನೂತನ ಸೇವೆಯನ್ನು ಆರಂಭಿರುವುದಾಗಿ ಬ್ಯಾಂಕ್ ಗುರುವಾರ(ನ.15) ತಿಳಿಸಿದೆ.
ಮನೆ ಸಾಲ, ವೃತ್ತಿ ಸಂಬಂಧಿ ಸಾಲ, ಸ್ವಯಂ ಉದ್ಯೋಗ ಮತ್ತು ವ್ಯಾಪಾರಕ್ಕಾಗಿ 2ಲಕ್ಷವರೆಗಿನ ಸಾಲವನ್ನು ಬ್ಯಾಂಕ್ ನಿಂದ ಪಡೆಯಬಹುದಾಗಿದೆ. ಈಗಾಗಲೇ ಈ ಸೇವೆ ಜಾರಿಯಲ್ಲಿದೆ. ಆದರೆ ಈ ಹಿಂದೆ 25ಲಕ್ಷಕ್ಕೂ ಅಧಿಕ ಮೊತ್ತದ ಸಾಲ ಪಡೆಯುವ ಮಂದಿಗೆ ಮಾತ್ರ ಈ ಸೇವೆ ಲಭ್ಯವಿತ್ತು. ಸೇವೆಯನ್ನು ಇತರೆ ಗ್ರಾಹಕರಿಗೂ ಈಗ ವಿಸ್ತರಿಸಲಾಗಿದೆ.
ಬ್ಯಾಂಕಿನ ವೆಬ್ ಸೈಟ್ www.syndicatebank.in ಗೆ ಭೇಟಿ ನೀಡಿ, ಸಾಲದ ಮನವಿಯನ್ನು ಸಲ್ಲಿಸಬಹುದು. ಸೇವೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.
(ಯುಎನ್ಐ)












Click it and Unblock the Notifications