ತಂತ್ರಾಂಶ ಪ್ರೀಪೆಯ್ಡ್ ವ್ಯಾಪಾರ ಮಾಡಲಿದೆ ಮೈಕ್ರೋಸಾಪ್ಟ್
ಬೆಂಗಳೂರು, ನ.15 : 'ಮೈಕ್ರೋಸಾಫ್ಟ್ ಆಫೀಸ್ ಪ್ರೊಫೆಷನಲ್07' ಈಗ ಪ್ರೀಪೆಯ್ಡ್‌ನಲ್ಲಿ ಲಭ್ಯವಾಗಲಿದೆ. ಕೆಲ ದಿನಗಳ ಕಾಲ ಮಾತ್ರ ಬಳಸುತ್ತಿದ್ದ ಗೃಹ ಬಳಕೆದಾರರು ಹಾಗೂ ಸಣ್ಣ ಉದ್ದಿಮೆಗಳವರಿಗೆ ಇದರಿಂದ ಅನುಕೂಲವಾಗಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಪ್ರೀಪೆಯ್ಡ್ ಸೇವೆಯನ್ನು ಒದಗಿಸುತ್ತಿದೆ.
ಏನಿದು ಪ್ರೀಪೆಯ್ಡ್ ವ್ಯವಹಾರ?
ಏನಿಲ್ಲ ಆರು ತಿಂಗಳಿಗೆ ಇಂತಿಷ್ಟು ಹಣ ಅಂತ ಪಾವತಿಸಿ ಅಷ್ಟು ದಿನಗಳ ಕಾಲ ಮೈಕ್ರೋಸಾಪ್ಟ್ ಆಫೀಸ್ ಪ್ರೊಫೆಷನಲ್07ನ್ನು ಬಳಸಬಹುದು.
ಖರ್ಚು ಎಷ್ಟಾಗುತ್ತದೆ?
ಆರು ತಿಂಗಳಿಗೆ 1,499ರೂಪಾಯಿ.
ಆಮೇಲೆ?
ಮತ್ತೆ ಸೇವೆ ಬೇಕು ಎಂದರೆ 3ತಿಂಗಳಿಗೆ 1,299 ರೂ.ಪಾವತಿಸ ಬೇಕು.
ಸರಿ, ತಂತ್ರಾಂಶದ ಕಾಲಾವಧಿ ಮುಗಿದ ಮೇಲೆ ಫೈಲ್‌ಗಳ ಗತಿ?
ಫೈಲ್‌ಗಳನ್ನು ವೀಕ್ಷಿಸಬಹುದು, ಬೇಕಿದ್ದರೆ ಪ್ರಿಂಟನ್ನೂ ತೆಗೆಯಬಹುದು. ಆದರೆ ಫೈಲ್‌ನಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications