ಸಂಪಾದಕ ಕುರ್ಚಿಯಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ!
ಕರೀಂನಗರ(ಆಂಧ್ರ ಪ್ರದೇಶ), ನ. 15 : ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ತಮ್ಮ ಸಂಪಾದಕತ್ವದಲ್ಲಿ ಆನ್ ಲೈನ್ ಪತ್ರಿಕೆಯೊಂದನ್ನು ಆರಂಭಿಸಿದ್ದಾರೆ. ಮಕ್ಕಳ ದಿನಾಚರಣೆಯ ದಿನ ಮಕ್ಕಳಿಗಾಗಿ ಈ ಅಂತರ್ಜಾಲ ತಾಣವನ್ನು ಅರ್ಪಣೆ ಮಾಡಲಾಯಿತು.
15ದಿನಗಳಿಗೊಮ್ಮೆ ಬಿಲಿಯನ್ ಬೀಟ್ಸ್ ಎಂಬ ಹೆಸರಿನ ಇ-ಪತ್ರಿಕೆ ಪ್ರಕಟವಾಗಲಿದೆ. ರಾಜಕೀಯ, ಕ್ರೈಂ, ಗಾಳಿ ಸುದ್ದಿಗಳನ್ನು ಹೊರತು ಪಡಿಸಿ, ಜ್ಞಾನಾಭಿವೃದ್ಧಿಗೆ ಬೇಕಾದ ಎಲ್ಲ ಬಗೆಯ ಮಾಹಿತಿಗಳನ್ನು ಇ-ಪತ್ರಿಕೆಯ ಮೂಲಕ ಪಡೆಯಬಹುದಾಗಿದೆ.
ಬಿಲಿಯನ್ ಬೀಟ್ಸ್ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಜನ ಭೇಟಿ ಕೊಡುತ್ತಿದ್ದಾರೆ. ಈ ವೆಬ್ ಸೈಟ್ ನ ಕಾರ್ಯನಿರ್ವಹಣೆ ಬೆಂಗಳೂರಿನಲ್ಲಿ ನಡೆಯಲಿದ್ದು, ಎಚ್ ಎಎಲ್ ಸಂಸ್ಥೆಯ ಅನಂತಕೃಷ್ಣನ್ ರಾಷ್ಟ್ರೀಯ ವ್ಯವಹಾರಗಳ ಸಂಪಾದಕರಾಗಿರುತ್ತಾರೆ.
ಬಿಲಿಯನ್ ಬೀಟ್ಸ್ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿ ,ಭಾರತದ ಉನ್ನತಿಗೆ ಕಾರಣವಾಗಲಿ ಎಂದು ಅಬ್ದುಲ್ ಕಲಾಂ ಅವರ ಕಟ್ಟಾ ಅಭಿಮಾನಿಯಾದ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ ಹಾರೈಸಿದ್ದಾರೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ : http://www.abdulkalam.com/kalam/index.jsp
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications