ಎಕ್ಸ್‌ಕಾನ್7: ಇಂದಿನಿಂದ ತಂತ್ರಜ್ಞಾನ ವ್ಯಾಪಾರ ಮೇಳ
ಬೆಂಗಳೂರು, ನ.14: ಬೃಹತ್ ನಿರ್ಮಾಣ ಉಪಕರಣಗಳು ಹಾಗೂ ತಂತ್ರಜ್ಞಾನ ವ್ಯಾಪಾರ ಮೇಳ'ಎಕ್ಸ್‌ಕಾನ್-2007" ಬೆಂಗಳೂರಿನಲ್ಲಿಬುಧವಾರ(ನ.14) ಪ್ರಾರಂಭವಾಯಿತು.
ನ.14ರಿಂದ ನ.18ರವರೆಗೆ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಮೇಳವು ನಡೆಯಲಿದೆ. ಈ ಮೇಳವನ್ನು ಭಾರತೀಯ ಉದ್ದಿಮೆಗಳ ಒಕ್ಕೂಟ ಹಾಗೂ ಇಂಡಿಯನ್ ಅರ್ತ್ ಮೂವಿಂಗ್ ಅಂಡ್ ಕನ್ಸ್‌ಟ್ರಕ್ಷನ್ ಇಂಡಸ್ಟ್ರಿ ಅಸೋಸಿಯೇಷನ್‌ಗಳು ಸಂಯುಕ್ತವಾಗಿ ಆಯೋಜಿಸಿವೆ.
ಮೇಳದಲ್ಲಿ 56ವಿದೇಶಿ ಕಂಪನಿಗಳೂ ಸೇರಿದಂತೆ ಒಟ್ಟು 282ಕಂಪನಿಗಳು ಭಾಗವಹಿಸುತ್ತಿವೆ. ನಿರ್ಮಾಣ ಕ್ಷೇತ್ರದಲ್ಲಿ ಹೂಡಿಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಉದ್ಯಮಿಗಳು ಇದರಿಂದ ಹೆಚ್ಚಿನ ಲಾಭ ಪಡೆಯಬಹುದೆಂದು ಮೇಳದ ಅಧ್ಯಕ್ಷರಾದ ವಿಪಿನ್ ಸೋಂಧಿ ತಿಳಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications