ಕ್ಯಾಪ್ಟನ್ ಗಿರಿ : ಕುಂಬ್ಳೆ ಹೆಗಲಿಗೆ ಮಣ ಭಾರದ ಜವಾಬ್ದಾರಿ
ಬೆಂಗಳೂರು, ನ.09 : ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ದ್ರಾವಿಡ್ ಅವರನ್ನು ಕೈಬಿಟ್ಟರಲ್ಲ ಎಂಬ ಸಿಟ್ಟು ಒಂದು ಕಡೆಯಿದ್ದರೂ, ನಮ್ಮವನೇ ಆದ ಅನಿಲ್ ಕುಂಬ್ಳೆಗೆ ಕ್ಯಾಪ್ಟನ್ ಗಿರಿ ಸಿಕ್ಕಿದೆಯಲ್ಲ ಎಂಬ ಖುಷಿ ಕನ್ನಡಿಗರಿಗೆ.
ತೆಂಡೂಲ್ಕರ್ ನಕಾರದಿಂದ, ಮಹೇಂದ್ರ ಸಿಂಗ್ ಧೋನಿಗೆ ನಾಯಕ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿಬಂದಿತ್ತು. ಅಂತಿಮ ಘಳಿಗೆಯಲ್ಲಿ ಸ್ಟಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡಲಾಗಿದೆ. ಪಾಕ್ ವಿರುದ್ಧದ ಮೂರು ಟೆಸ್ಟ್ ಮ್ಯಾಚ್ ಗಳಿಗೆ ಭಾರತ ತಂಡವನ್ನು ನಾಯಕರಾಗಿ ಕುಂಬ್ಳೆ ಸಜ್ಜುಗೊಳಿಸಬೇಕಾಗಿದೆ. ನ.22ರಂದು ದೆಹಲಿಯಲ್ಲಿ ಟೆಸ್ಟ್ ಪಂದ್ಯ ಆರಂಭವಾಗಲಿದೆ.
37ವರ್ಷದ ಅನಿಲ್ ರಾಧಾಕೃಷ್ಣ ಕುಂಬ್ಳೆ, ತಮ್ಮ 18ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಏರಿಳಿತದ ಹಾದಿಯನ್ನು ಕಂಡಿದ್ದಾರೆ. ಹೊಸ ದಾಖಲೆಗಳ ಬರೆದಿದ್ದಾರೆ. ಹೊಸ ಸವಾಲು ಅರ್ಥಾತ್ ಒತ್ತಡವನ್ನು ಸಮರ್ಥವಾಗಿ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಕುಂಬ್ಳೆ ಶುಕ್ರವಾರ(ನ.09) ಪ್ರತಿಕ್ರಿಯಿಸಿದ್ದಾರೆ.
ತಂಡದ ನಾಯಕನಾಗುವುದು ಪ್ರತಿಯೊಬ್ಬ ಆಟಗಾರನ ಕನಸು. ನನಗೆ ಆ ಜವಾಬ್ದಾರಿ ಸಿಕ್ಕಿದೆ ಎಂದಿರುವ ಕುಂಬ್ಳೆ 118 ಟೆಸ್ಟ್ ಗಳನ್ನು ಆಡಿ, ಅಪಾರ ಅನುಭವ ಹೊಂದಿದ್ದಾರೆ. ಬೆಸ್ಟ್ ಆಫ್ ಲಕ್ ಕುಂಬ್ಳೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications