ಮುಖೇಶ್ ವಿಶ್ವದ ನಂ.1ಕುಬೇರ: ಈ ಸುದ್ದಿ ನಂಬಬೇಡಿ!

ನವದೆಹಲಿ, ಅ.31 : ಗೂಟ ಕಿತ್ತುಕೊಂಡು ಓಡಿದ ಗೂಳಿಯ ವೇಗಕ್ಕೆ ಷೇರುಪೇಟೆ ತಲ್ಲಣಗೊಂಡಿದ್ದು, ಪತ್ರಿಕೆಗಳೂ ಸೇರಿದಂತೆ ಸಮಸ್ತ ಮಾಧ್ಯಮ 'ವಿಶ್ವದ ನಂ.1 ಶ್ರೀಮಂತ ಮುಖೇಶ್ ಅಂಬಾನಿ" ಎನ್ನುವ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ಸುಳ್ಳು ಎಂದು ರಿಲಯನ್ಸ್ ತಿಳಿಸಿದೆ.

ಭಾರತೀಯ ಷೇರುಪೇಟೆಯಲ್ಲಿ ಎದ್ದ ಬಿರುಗಾಳಿ ಮುಖೇಶ್ ಅಂಬಾನಿಯನ್ನು ಎತ್ತರಕ್ಕೆ ಕೊಂಡೊಯ್ದು ಕುಬೇರನ ಸ್ಥಾನದಲ್ಲಿ ಕೂರಿಸಿತ್ತು. ಏಜನ್ಸಿಯೊಂದು ತಿಳಿಸಿದಂತೆ ಅವರ ಆಸ್ತಿ 63.2 ಶತಕೋಟಿ ಡಾಲರ್ ಅಲ್ಲ, ಈ ವರದಿ ತಪ್ಪು ಎಂದು ರಿಲಯನ್ಸ್ ಸಂಸ್ಥೆ ಪ್ರಕಟಿಸಿದೆ. ಅವರ ಲೆಕ್ಕಾಚಾರ ತಪ್ಪಾಗಿದೆ. ಎರಡೆರಡು ಬಾರಿ ಎಣಿಕೆ ಮಾಡಿದ್ದರಿಂದ ಈ ಎಡವಟ್ಟಾಗಿದೆ ಎಂದು ರಿಲಯನ್ಸ್ ವಕ್ತಾರ ತುಷಾರ್ ಪಣಿಯ ತಿಳಿಸಿದ್ದಾರೆ.

ಫೋರ್ಬ್ ಸಮೀಕ್ಷೆಯ ಪ್ರಕಾರ ವಿಶ್ವದ ಶ್ರೀಮಂತರಲ್ಲಿ ಅಂಬಾನಿ 20.1 ಶತಕೋಟಿ ಡಾಲರ್ ಆಸ್ತಿಗಳಿಸಿ 14ನೇ ಸ್ಥಾನದಲ್ಲಿದ್ದಾರೆ. ಮೈಕ್ರೊಸಾಪ್ಟ್ ಬಿಲ್‌ಗೇಟ್ಸ್‌ನ ಆಸ್ತಿಯೇ 56ಶತಕೋಟಿ ಡಾಲರ್. ಅ.29ರ ಷೇರುಪೇಟೆ ಓಟಕ್ಕೆ ಅಂಬಾನಿಯ ಆಸ್ತಿ 50 ಶತಕೋಟಿ ಡಾಲರ್‌ನ ಆಜುಬಾಜು ಇರಬಹುದೆಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

49ವರ್ಷದ ಅಂಬಾನಿ ರಿಲಯನ್ಸ್ ಕಂಪನಿಯಲ್ಲಿ ಪ್ರತ್ಯಕ್ಷವಾಗಿ ಷೇರು ಹೊಂದಿಲ್ಲ. ಅಂಬಾನಿಯ ಆಸ್ತಿಯನ್ನು ರಿಲಯನ್ಸ್ ಕಂಪನಿ ಹಾಗೂ ಅದರ ಸಮೂಹ ಕಂಪನಿಗಳಾದ ರಿಲಯನ್ಸ್ ಪೆಟ್ರೋಲಿಯಂ ಮತ್ತು ರಿಲಯನ್ಸ್ ಇಂಡಸ್ಟ್ರೀಯಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌‍ನಲ್ಲಿ ಮಾತ್ರ ಪಾಲುಹೊಂದಿದ್ದಾರೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಷೇರು ಪವಾಡ : ಮುಖೇಶ್ ವಿಶ್ವದ ನಂ.1 ಶ್ರೀಮಂತ

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+