ಪ್ರೇಮಾ ಕಾರಂತ ಇನ್ನಿಲ್ಲ : ವೇದಿಕೆ ಮೇಲೆ ಮತ್ತೆ ಕತ್ತಲು

Prema Karanthಬೆಂಗಳೂರು, ಅ.26 : ತೀವ್ರ ಅನಾರೋಗ್ಯದಿಂದ ಬಳಲಿದ್ದ ರಂಗ ನಿರ್ದೇಶಕಿ ಮತ್ತು ವಸ್ತ್ರ ವಿನ್ಯಾಸಕಿ ಪ್ರೇಮಾ ಕಾರಂತ(60) ಸೋಮವಾರ ಬೆಳಗ್ಗೆ 11.30ರ ಸುಮಾರಿನಲ್ಲಿ ಕೊನೆ ಉಸಿರೆಳೆದರು.

ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪ್ರೇಮಾ ಕಾರಂತ ಅವರನ್ನು ಮಂಗಳವಾರ(ಅ.23)ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಹೃದಯ ಸಮಸ್ಯೆ ಜೊತೆಗೆ ಕಿಡ್ನಿ ತೊಂದರೆಯನ್ನೂ ಹೊಂದಿದ್ದರು. ನಗರದ ವಿಲ್ಸನ್ ಗಾರ್ಡನ್ ನಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.

ತಮ್ಮ ಪತಿ ದಿವಂಗತ ಬಿ.ವಿ.ಕಾರಂತ ಅವರ ಜೊತೆ ಸೇರಿ ಸುಮಾರು ನಾಲ್ಕು ದಶಕಗಳ ಕಾಲ ರಂಗಭೂಮಿಯಲ್ಲಿ ಪ್ರೇಮಾ ಕಾರಂತ ದುಡಿದಿದ್ದರು. ಬೆನಕ ಮಕ್ಕಳ ರಂಗವನ್ನು ಕಟ್ಟಿ, ಮಕ್ಕಳ ಮಕ್ಕಳ ರಂಗಭೂಮಿಗೆ ಅವರು ಸೇವೆ ಸಲ್ಲಿಸಿದ್ದರು. ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿದ್ದವು. 'ಫಣಿಯಮ್ಮ'ಸೇರಿದಂತೆ ಆರು ಚಲನಚಿತ್ರಗಳನ್ನು ಪ್ರೇಮಾ ಕಾರಂತ ನಿರ್ದೇಶಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+