20 ಸಾವಿರದ ಗಡಿಯನ್ನು ಚುಂಬಿಸಿದ ಮುಂಬೈ ಷೇರುಪೇಟೆ
ಮುಂಬೈ, ಅ. 29 : ಮುಂಬೈ ಷೇರುಪೇಟೆ ಸೂಚ್ಯಂಕ ಸೋಮವಾರ ಮದ್ಯಾಹ್ನ 20 ಸಾವಿರ ಗಡಿಯನ್ನು ಮುಟ್ಟಿದ್ದು ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.
ಬೆಳಿಗ್ಗೆಯೇ 378 ಪಾಯಿಂಟ್‌ಗಳಷ್ಟು ಜಿಗಿತಪಡೆದ ಸೂಚ್ಯಂಕ 20 ಸಾವಿರದ ಗಡಿಯ ಆಸುಪಾಸಿನಲ್ಲೇ ಆಟವಾಡುತ್ತಿತ್ತು. ಮದ್ಯಾಹ್ನ ಮತ್ತಷ್ಟು ಏರಿಕೆ ಪಡೆದು ಷೇರುದಾರರಲ್ಲಿ, ಬ್ರೋಕರುಗಳಲ್ಲಿ ಹರುಷದ ಹೊನಲನ್ನು ಹರಿಸಿದೆ.
9ರಿಂದ ಹತ್ತರ ಗಡಿ ಮುಟ್ಟಲು 49 ದಿನ ತೆಗೆದುಕೊಂಡಿದ್ದ ಸೂಚ್ಯಂಕ 18ರಿಂದ 19ರ ಗಡಿಯನ್ನು ಕೇವಲ 4 ದಿನಗಳಲ್ಲಿ ಮುಟ್ಟಿತ್ತು. ಏಷ್ಯಾದ ಮಾರುಕಟ್ಟೆ ಕಂಡ ಸ್ಥಿಮಿತದಿಂದಾಗಿ ಕೇವಲ 13 ದಿನಗಳಲ್ಲಿ 20 ಸಾವಿರದ ಮ್ಯಾಜಿಕಲ್ ಫಿಗರ್ ತಲುಪಿದೆ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ಲಾರ್ಸನ್ ಅಂಡ್ ಟೂಬ್ರೋ ಮತ್ತು ಎನ್‌ಟಿಪಿಸಿ ಷೇರುಗಳು ಭಾರೀ ಏರನ್ನು ಪಡೆದಿವೆ. ರಿಲಾಯನ್ಸ್ ಇಂಡಸ್ಟ್ರಿ ಕೂಡ ತನ್ನ ಮುಂದಾಳತ್ವವನ್ನು ಕಾಪಾಡಿಕೊಂಡಿದೆ.
(ಯುಎನ್ಐ)












Click it and Unblock the Notifications