ಧೋನಿ ಹೇರ್ ಸ್ಟೈಲ್ ಬದಲಾಗಿದೆ; ಬೇಕಿದ್ದರೇ ನೋಡಿ!

New look Dhoniರಾಂಚಿ, ಅ.25 : ಉದ್ದನೆಯ ಕೂದಲುಗಳನ್ನು ಕುತ್ತಿಗೆವರೆಗೆ ಚೆಲ್ಲಾಡಿಕೊಂಡು ಮಿಂಚುತ್ತಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಕೇಶ ವಿನ್ಯಾಸ ಬದಲಿಸಿದ್ದಾರೆ.

ಧೋನಿಯಂತೆಯೇ ಕೇಶ ವಿನ್ಯಾಸ ಮಾಡಿಸಿಕೊಂಡು, ಧೋನಿ ಅಭಿಮಾನಿಗಳು ಸಂಭ್ರಮಿಸಿದ್ದರು. ವಿಶ್ವಕಪ್ ನಲ್ಲಿ ಧೋನಿ ಕಳಪೆ ಆಟ ಕಂಡು, ಅಸಮಾಧಾನದಿಂದ ತಮ್ಮ ಧೋನಿ ಶೈಲಿಯ ಉದ್ದನೆಯ ಕೂದಲಿಗೆ ಕೆಲವರು ಕತ್ತರಿ ಹಾಕಿದ್ದರು. ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಸಹಾ, ಧೋನಿ ಕೂದಲ ಕಂಡು ಭೇಷ್ ಎಂದಿದ್ದರು.

ಇಷ್ಟೆಲ್ಲ ಮೆಚ್ಚುಗೆ ಮಧ್ಯೆಯೂ ಕಳೆದ ಡಿಸೆಂಬರ್ ನಲ್ಲಿ ಧೋನಿ ತಮ್ಮ ಹೇರ್ ಸ್ಟೈಲ್ ಬದಲಿಸಿದ್ದರು. ಈಗ ಟ್ರಿಮ್ ಮಾಡಿಸಿಕೊಂಡು, ಹೊಸ ಲುಕ್ ನೀಡುತ್ತಿದ್ದಾರೆ.ಸಿನಿಮಾ ನಟರಂತೆಯೇ, ಧೋನಿ ಆಗಾಗ ಗೆಟಪ್ ಬದಲಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋತ ನಂತರ ಮೊದಲ ಸಲ ತವರು ನೆಲ ರಾಂಚಿಗೆ ಅವರು ಬುಧವಾರ(ಅ.24) ಭೇಟಿ ನೀಡಿದರು. ಅವರ ಬದಲಾದ ಕೇಶವಿನ್ಯಾಸ ಕಂಡು, ಜನರಿಗೆ ಅಚ್ಚರಿಯೋ ಅಚ್ಚರಿ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+