ಈ ರಾತ್ರಿ ಬಾನಲ್ಲಿ ಚಂದಮಾಮ ಮಿಂಚಿಂಗೋ ಮಿಂಚಿಂಗು!
ಮುಂಬಯಿ, ಅ.25 : ಅಕ್ಟೋಬರ್ ತಿಂಗಳ 25ಮತ್ತು 26ರಂದು ಚಂದ್ರ ಅತ್ಯಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಂಡು 2007ನೇ ವರ್ಷದಲ್ಲಿ ದಾಖಲೆ ಸೃಷ್ಟಿಸಲಿದ್ದಾನೆ. ಪೂರ್ಣಚಂದ್ರನ ಗಾತ್ರ ಈ ಎರಡು ದಿನಗಳಲ್ಲಿ ಎಂದಿಗಿಂತಲೂ ಶೇ.14ರಷ್ಟು ಅಗಲ ಮತ್ತು ಶೇ.30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಚಂದ್ರ ಭೂಮಿಗೆ ತೀರಾ ಸಮೀಪ ಬರುವುದರಿಂದ ಈ ವಿದ್ಯಮಾನ ಸಂಭವಿಸಲಿದೆ. ಇಷ್ಟು ದಿನ ಚಂದ್ರನೆಡೆಗೆ ತೋರು ಬೆರಳಿಟ್ಟು ಚಂದ್ರ ಇರುವುದೇ ಇಷ್ಟು ಎನ್ನುತ್ತಿದ್ದೆವು. ಆದರೆ ಗುರುವಾರ ಮತ್ತು ಶುಕ್ರವಾರ ನಾವು ಹಾಗೆ ಹೇಳುವಂತಿಲ್ಲ ಕಾರಣ ಅಂದು ಚಂದ್ರ ನಮ್ಮ ತೋರು ಬೆರಳಿಗಿಂತಲೂ ದೊಡ್ಡದಾಗಿ ಕಾಣುತ್ತಾನೆ ಎಂದು ತಜ್ಞರು ತಿಳಿಸಿದ್ದಾರೆ.
ಚೀನಾದ 'ಚಾಂಗ್" ಬಾಹ್ಯಾಕಾಶ ನೌಕೆಯ ಚಂದ್ರಯಾನಕ್ಕೂ ಈ ಪ್ರಕಾಶಮಾನಕ್ಕೂ ಯಾವುದೇ ಸಂಬಂಧವಿಲ್ಲ. ಅದು ಏನಿದ್ದರೂ ಕಾಕತಾಳೀಯ ಎಂದು ನಾಸಾ ತಿಳಿಸಿದೆ. ದೂರದರ್ಶಕಗಳ ಮೂಲಕ ಚಂದ್ರನನ್ನು ವೀಕ್ಷಿಸುವುದರಿಂದ ಕಣ್ಣುಗಳಿಗೆ ಹಾನಿಯಾಗಬಹುದು ಆದ್ದರಿಂದ ಅಲ್ಯೂಮಿನಿಯಂ ಕಪ್ಪು ಶೋಧಕವನ್ನು ಬಳಸಿ ವೀಕ್ಷಿಸಲು ವಿಜ್ಞಾನಿಗಳು ಸಲಹೆ ಮಾಡಿದ್ದಾರೆ.
ಮತ್ತಷ್ಟು ಮಾಹಿತಿಗಾಗಿ ಈ ಕೊಂಡಿಯನ್ನು ಬಳಸಿ : www.spaceweather.com.
(ಏಜನ್ಸೀಸ್)












Click it and Unblock the Notifications