400ಇದು ನನ್ನ ದೃಷ್ಟಿಯಲ್ಲಿ ಕೇವಲ ಸಂಖ್ಯೆಯಷ್ಟೆ: ಸಚಿನ್

400ಇದು ನನ್ನ ದೃಷ್ಟಿಯಲ್ಲಿ ಕೇವಲ ಸಂಖ್ಯೆಯಷ್ಟೆ: ಸಚಿನ್ಮೊದಲ ಏಕದಿನ ಪಂದ್ಯದಲ್ಲಿ ಸಚಿನ್ ಸ್ಕೋರು ಸೊನ್ನೆ. 100ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಳು ರನ್. 200ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಎರಡು ರನ್. 300ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ರನ್. ಸಚಿನ್ ಮೊದಲ ಶತಕ ಬಾರಿಸಿದ್ದು 79 ಏಕದಿನ ಪಂದ್ಯಗಳಾಡಿದ ಮೇಲೆ.

1989ರಲ್ಲಿ ಪಾಕಿಸ್ತಾನದ ಜಿನ್ನಾ ಕ್ರೀಡಾಂಗಣದಲ್ಲಿ ಮೊದಲ ಮ್ಯಾಚ್ ಆಡಿದಾಗ ನನಗೆ ಕೇವಲ 16ವರ್ಷ. ಈಗ ತನ್ನ ವೃತ್ತಿ ಜೀವನಕ್ಕೆ 18ರ ಪ್ರಾಯ. ಮಾಸ್ಟರ್ ಬ್ಲಾಸ್ಟರ್, ಬಾಂಬೆ ಬಾಂಬರ್, ಒವ್ ಅಂಡ್ ಓನ್ಲಿ ಈ ಮೂರು ಬಿರುದುಗಳೆಂದರೆ ನನಗಿಷ್ಟ ಎನ್ನುತ್ತಾರೆ ಸಚಿನ್.

ಹೀರೋ ಕಪ್‌ ಸೆಮಿ ಫೈನಲ್‌‍ನ ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿದ್ದು. ಷಾರ್ಜಾದಲ್ಲಿ ಆಡಿದ ಇನ್ನಿಂಗ್ಸ್ ಹಾಗೂ 2003ರ ವಿಶ್ವಕಪ್‌ನಲ್ಲಿ ಮಾಡಿದ 98ರನ್‌ಗಳು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಕ್ರಿಕೆಟ್ ನನ್ನ ಸರ್ವಸ್ವ. ಕ್ರಿಕೆಟ್ ಇಲ್ಲದೆ ನನ್ನ ಜೀವನವಿಲ್ಲ. ಭಾರತ ತಂಡದಲ್ಲಿ ಆಡುತ್ತಿದ್ದೇನೆ ಎನ್ನುವ ಭಾವನೆ ನನ್ನಲ್ಲಿ ಉತ್ಸಾಹ ಮೂಡಿಸುತ್ತದೆ. ಅಜರುದ್ದೀನ್, ಅಜಯ್ ಜಡೇಜ, ಗಂಗೊಲಿ, ವಿನೋದ್ ಕಾಂಬ್ಲಿ, ರಾಹುಲ್ ದ್ರಾವಿಡ್, ಸೆಹ್ವಾಗ್, ಯುವರಾಜ್, ಧೋನಿಯ ಜೊತೆಗೆ ಲಾರಾ, ಇಂಜಿ ನನಗಿಷ್ಟವಾದ ಆಟಗಾರರು ಎಂದು ಸಚಿನ್ ಹೇಳಿದ್ದಾರೆ.

(ದಟ್ಸ್ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+