2ನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಲಾಭ 1100ಕೋಟಿ

ಬೆಂಗಳೂರು, ಅ.11 : ಇನ್ಫೋಸಿಸ್ ಟೆಕ್ನಾಲಜಿ ಲಿಮಿಟೆಡ್ ಗುರುವಾರ(ಅ.11) ಪ್ರಸಕ್ತ ಹಣಕಾಸು ವರ್ಷದ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಇನ್ಫೋಸಿಸ್ ಸಂಸ್ಥೆಯು ತೆರಿಗೆ ಮತ್ತಿತರ ಖರ್ಚುಗಳನ್ನು ತೆಗೆದು ಹಾಕಿದರೆ ಸುಮಾರು 1074ಕೋಟಿ ರೂ.ಲಾಭ ಗಳಿಸಿದೆ. ಕಳೆದ ಸೆ.30,2006ರಲ್ಲಿ ಸಂಸ್ಥೆ 896ಕೋಟಿ ಲಾಭ ಗಳಿಸಿದ್ದು, ಕಳೆದ ಸಲಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಹೆಚ್ಚಳವಾಗಿದೆ. ಸೆ.30,2006ರಲ್ಲಿ 3339ಕೋಟಿ ರೂ. ಆದಾಯ ಹೊಂದಿದ್ದ ಸಂಸ್ಥೆ ಇದೀಗ(ಸೆ.30,2007) 4005ಕೋಟಿ ರೂ.ಆದಾಯ ಹೊಂದಿದೆ.

ಒಟ್ಟಾರೆ ಲಾಭ ಮತ್ತು ಆದಾಯ :

ಒಟ್ಟಾರೆ ಇನ್ಫೋಸಿಸ್ ಸಮೂಹವು ಸೆ.30,2007ಕ್ಕೆ ಅಂತ್ಯಕೊಂಡ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆ ಶೇ.18.41ರಷ್ಟು ಅಂದರೆ 1100ಕೋಟಿ ಲಾಭ ಗಳಿಸಿದೆ. ಸೆ.30,2006ರ ಅವಧಿಯಲ್ಲಿ ಅದು 929ಕೋಟಿ ಲಾಭ ಪಡೆದಿತ್ತು. ಈ ಅವಧಿಯಲ್ಲಿ 3517ಕೋಟಿ ಆದಾಯ ಹೊಂದಿದ್ದ ಸಂಸ್ಥೆ ಸೆ.302007ರಲ್ಲಿ 4260ಕೋಟಿ ಆದಾಯ ದಾಖಲಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+