ಮೈಸೂರು ದಸರಾ ವೆಬ್ ಸೈಟ್ ಸರ್ವಂ ಇಂಗ್ಲಿಷ್ ಮಯಂ!

ಬೆಂಗಳೂರು, ಅ.11 : ಮೈಸೂರು ದಸರಾ ನೋಡಲು ಎಷ್ಟೊಂದು ಸುಂದರ. ಆದರೆ ದಸರಾದ ಅಂತರ್ಜಾಲ ಪುಟ ನೋಡಲು ಅಷ್ಟೇ ಭಯಂಕರ. ಕಾರಣ; ಕನ್ನಡ ಕಾಣೆಯಾಗಿದೆ.

ಮೈಸೂರು ದಸರಾ ವಿಶೇಷಗಳನ್ನು ತಿಳಿದುಕೊಳ್ಳಲು ಈ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟರೆ ಇಲ್ಲಿ ಎಲ್ಲಾ ಇಂಗ್ಲಿಷ್‌ಮಯ. ಕನ್ನಡದಲ್ಲಿ ಮಾಹಿತಿ ಅಲಭ್ಯ. ಇಲ್ಲಿ ಒಂದೇ ಒಂದು ಅಕ್ಷರವೂ ಕನ್ನಡದಲ್ಲಿಲ್ಲ. ಸರ್ವಂ ಇಂಗ್ಲಿಷ್ ಮಯಂ.

ಅಂತರ್ಜಾಲದ ಕೊಂಡಿ : http://www.mysoredasara.com/events.htm

ಇಂಗ್ಲಿಷ್ ಜೊತೆಗೆ ಇಟಲಿಯನ್, ಫ್ರೆಂಚ್, ಜರ್ಮನ್, ಪೋರ್ಜುಗೀಸ್, ಜಪಾನೀಸ್, ರಷ್ಯನ್, ಸ್ಪ್ಯಾನಿಶ್, ಅರೇಬಿಕ್ ಮತ್ತು ಹಿಂದಿ ಭಾಷೆಗಳನ್ನು ಇಲ್ಲಿ ಕಾಣಬಹುದು. ಇದನ್ನು ಪರಭಾಷೆಯವರಿಗಾಗಿ ರೂಪಿಸಲಾಗಿದೆ. ಬಳಕೆದಾರರ ಬಳಿ ಕನ್ನಡ ಫಾಂಟ್ ಇರುವುದಿಲ್ಲ. ಇದನ್ನು ಯೂನಿಕೋಡ್‌ನಲ್ಲಿ ರೂಪಿಸಲು ಸಮಯ ಬೇಕಾಗುತ್ತದೆ. ಕನ್ನಡದಲ್ಲಿ ಈ ಅಂತರ್ಜಾಲ ಪುಟವನ್ನು ರೂಪಿಸಿದರೆ ತಾಣಕ್ಕೆ ಭೇಟಿಕೊಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಇವು ಅಧಿಕಾರಿಗಳು ಕೊಡುವ ಸಬೂಬುಗಳು. ನೋಡಿ ಹೇಗಿದೆ ಕನ್ನಡಪರ ನಿಲುವು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+