ಏರುತ್ತಲೇ ಇದೆ ಏರ್ ಟೆಲ್ ಸಂಸ್ಥೆಯ ಲಾಭದ ಮೀಟರ್!
ಮುಂಬಯಿ, ಅ.11 : ಈಗ ಷೇರು ಮಾರುಕಟ್ಟೆಯಲ್ಲಿ ಗೂಳಿಯದ್ದೇ ಓಟ. ಹಾಗಾಗಿ ಬಹಳಷ್ಟು ಕಂಪನಿಗಳು ಲಾಭದಲ್ಲಿವೆ. ಭಾರತಿ ಏರ್ ಟೆಲ್ 2 ಲಕ್ಷ ಕೋಟಿ ರೂ. ಲಾಭಗಳಿಸಿ ರಿಲಯನ್ಸ್ ಇಂಡಸ್ಟ್ರೀಸ್, ಒಎನ್‌ಜಿಸಿ ಕಂಪನಿಗಳ ಸಾಲಿಗೆ ಸೇರಿದೆ.
ಭಾರತಿ ಏರ್ ಟೆಲ್ ಕಂಪನಿಯಲ್ಲಿ ಸುನಿಲ್ ಮಿತ್ತಲ್ ಪಾಲು ಶೇ.50ರಷ್ಟಿದೆ. ಬುಧವಾರ(ಅ.10)ದ ಷೇರುಪೇಟೆಯಲ್ಲಿ ತನ್ನ ಕಂಪನಿ ಷೇರುಗಳು 1,067 ರೂ.ಏರಿಕೆ ಕಂಡು , ಒಟ್ಟಾರೆ ಕಂಪನಿ ಮಾರುಕಟ್ಟೆ ಬಂಡವಾಳ 2,02,627 ಕೋಟಿ ರೂ.ಗೆ ತಲುಪಿದೆ. ಈಗ ಸುನಿಲ್ ಮಿಟ್ಟಲ್‌ರ ಆಸ್ತಿ 1,01,314 ಕೋಟಿ ರೂ.ಗಳು!
ಲಕ್ಷ ಕೋಟಿ ರೂ.ಒಡೆಯರಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ ಮತ್ತು ಅಜೀಂ ಪ್ರೇಮ್‌ಜಿ ಜೊತೆಗೆ ಸುನಿಲ್ ಮಿಟ್ಟಲ್ ಹೆಸರೂ ಸೇರ್ಪಡೆಯಾಗಿದೆ. ದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ವಿಪ್ರೊ, ಒಎನ್‌ಜಿಸಿ 2 ಲಕ್ಷ ಕೋಟಿ ರೂ. ಲಾಭದ ಕಂಪನಿಗಳು. ಇವುಗಳ ಸಾಲಿಗೆ ನಾಲ್ಕನೆಯದಾಗಿ ಭಾರತಿ ಏರ್ ಟೆಲ್ ಸೇರ್ಪಡೆಯಾಗಿದೆ.
(ಏಜನ್ಸೀಸ್)












Click it and Unblock the Notifications