8ರನ್ನೋ, 1ರನ್ನೋ ಭಾರತ ಗೆದ್ದಿದೆ! ತಟ್ಟಿ ಚಪ್ಪಾಳೆ!

ಚಂಡೀಗಢ, ಅ.8 : ಆಸ್ಟ್ರೇಲಿಯಾ ವಿರುದ್ಧ ಭಾರತ 8 ರನ್‌ಗಳ ಜಯಗಳಿಸಿದೆ. ಸೋಮವಾರ(ಅ.08)ನಾಲ್ಕನೆ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ, ಫ್ಯೂಚರ್ ಕಪ್‌ನ ಆಸೆ ಚಿಗುರಿಸಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗನ್ನು ಆಯ್ಕೆ ಮಾಡಿಕೊಂಡಿತು. ಸಚಿನ್ ತೆಂಡೂಲ್ಕರ್ ಹಾಗೂ ಧೋನಿಯ ಅರ್ಧ ಶತಕಗಳು ಟೀಮ್ ಇಂಡಿಯಾ ಗೆಲ್ಲಲು ಕಾರಣವಾದವು. 119 ಬಾಲ್‌ಗಳಿಗೆ ಸಚಿನ್ 79ರನ್‌ಗಳನ್ನು, ಯುವರಾಜ್ ಸಿಂಗ್ 39 ಹಾಗೂ ಗಂಗೂಲಿ 41 ರನ್‌ಗಳ ಉತ್ತಮ ಮೊತ್ತವನ್ನು ಪೇರಿಸಿ ತಂಡದ ಗೆಲುವಿಗೆ ಕಾರಣರಾದರು. ಧೋನಿ ಕೇವಲ 35 ಬಾಲ್‌ಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ರಾಬಿನ್ ಉತ್ತಪ್ಪ 18 ಬಾಲ್‌ಗೆ 30 ರನ್‌ಗಳನ್ನು ಗಳಿಸಿದರು. ಧೋನಿಯ ಬ್ಯಾಟಿಂಗ್ ಆಯ್ಕೆಯ ನಿರ್ಣಯ ಸರಿಯಾಗಿಯೇ ಇತ್ತು.

50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 291 ರನ್‌ಗಳ ಮೊತ್ತವನ್ನು ಆಸ್ಟ್ರೇಲಿಯಾ ಮುಂದಿಟ್ಟಿತು ಭಾರತ. ಆನಂತರ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮ್ಯಾಥ್ಯು ಹೇಡನ್ 92 ಆಂಡ್ರ್ಯೂ ಸೈಮಂಡ್ಸ್ 75 ರನ್‌ಗಳನ್ನು ತಂದುಕೊಟ್ಟರಾದರೂ ಪಂದ್ಯ ಗೆಲ್ಲಲು ವಿಫಲರಾದರು. ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿ 8 ರನ್‌ಗಳ ಅಂತರದಿಂದ ಸೋತಿತು.

ಧೋನಿಯ ಬ್ಯಾಟಿಂಗ್ ಆಕರ್ಷಕವಾಗಿತ್ತು. ಅದರಲ್ಲೂ ಕೊನೆಯ ಓವರ್ ಅದ್ಭುತ. ನಾಥನ್ ಕೊನೆಯ ಓವರ್‌ ಈ ರೀತಿಯಾಗಿತ್ತು 1,4,4,1,4,6. ಕೊನೆಯ ಬಾಲ್‌ನಲ್ಲಿ ಧೋನಿ ಹೊಡೆದ ಸಿಕ್ಸರ್ ಕ್ರಿಕೆಟ್ ಅಭಿಮಾನಿಗಳಲ್ಲಿ ಚಿರಕಾಲ ಉಳಿಯುತ್ತದೆ. ಆರ್.ಪಿ.ಸಿಂಗ್ ಹಾಗೂ ಹರ್ಭಜನ್ ಸಿಂಗ್ ತಲಾ 2 ವಿಕೆಟ್, ಪಠಾಣ್ ಹಾಗೂ ಕಾರ್ತಿಕ್ ತಲಾ 1 ವಿಕೆಟನ್ನು ಪಡೆದರು.

(ದಟ್ಸ್‌ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+