ಮೊಬೈಲ್ ಫೋನಿನಲ್ಲಿ ಕನ್ನಡ ಸುದ್ದಿ ತಿಳಿಯುವ ಜಮಾನಾಗೆ ಸ್ವಾಗತ

thatskannada on your cell domainಬೆಂಗಳೂರು, ಸೆ. 27 : ನಿಮ್ಮ ಮೆಚ್ಚಿನ ದಟ್ಸ್ ಕನ್ನಡ ಡಾಟ್ ಕಾಮ್ ಓದುವುದಕ್ಕೆ ಇನ್ನುಮೇಲೆ ಕಂಪ್ಯೂಟರ್ ಅಗತ್ಯವಿಲ್ಲ!! ಕರೆಂಟು, ಮೋಡೆಮ್ಮು, ಡೌನ್ಲೋಡ್ ಸ್ಪೀಡುಗಳ ಹಂಗಿಲ್ಲ. ಮನೆ, ಕಚೇರಿ, ಚಿತ್ರಮಂದಿರ, ಬಸ್ಸು ರೈಲು ಏರೋಪ್ಲೇನು, ಫುಟ್ಪಾತು ಫೈವ್ ಸ್ಟಾರ್ ಹೋಟೆಲುಗಳೆಂಬ ಭೇದಭಾವವಿಲ್ಲ. ಎಲ್ಲಿ ನಿನ್ನ ಭಕ್ತರೋ ಅಲ್ಲೆ ದಟ್ಸ್ ಕನ್ನಡ!

ನೀವು ಇರುವೆಡೆ, ಹೋದೆಡೆ, ಬಂದೆಡೆ ನಿಮ್ಮನ್ನು ನೆರಳಿನಂತೆ ಹಿಂಬಾಲಿಸುವ ದಟ್ಸ್ ಕನ್ನಡದ ಕನ್ನಡ ಸುದ್ದಿ-ಸಿನಿಮಾ ವಾಹಿನಿಯ ಮೊಬೈಲ್ ಆವೃತ್ತಿ ಇದೀಗ ಬಿಡುಗಡೆ ಆಗಿದೆ. ಭಾರತೀಯ ಮೊಬೈಲ್ ಸೆಟ್ಟುಗಳಲ್ಲಿ ಕನ್ನಡದ ಸೊಗಡನ್ನು ಕ್ಷಣ ಕ್ಷಣ ಚಿಮ್ಮುವ ಏಕಮಾತ್ರ ಮತ್ತು ಮೊಟ್ಟಮೊದಲ ಅಂತರ್ಜಾಲ ತಾಣ ಎಂಬ ಹೆಮ್ಮೆಗೆ ಪಾತ್ರವಾಗಿದೆ ಅದುವೆಕನ್ನಡ.

ಮುಷ್ಟಿಯೊಳಗೆ ಕುಣಿಯುವ ಕನ್ನಡ ಸುದ್ದಿ ಸಾರಗಳನ್ನು ಓದುವ ಕನ್ನಡಾಭಿಮಾನಿಗಳಿಗೆ ಸೆ.27ರ ಹಾರ್ದಿಕ ಶುಭಾಶಯಗಳು. ನಿಮ್ಮ ಮೆಚ್ಚಿನ ಭಾಷೆಯಲ್ಲಿ ಸುದ್ದಿಸೊಗಡನ್ನು ಯಾವುದೇ ವೇಳೆಯಲ್ಲಿ ಓದಬೇಕೆಂದಾಗ ಇನ್ನು ಮೇಲೆ ಇಂಟರ್‌ನೆಟ್ ಕೆಫೆಗೆ ದೌಡಾಯಿಸುವ ಅಗತ್ಯವಿಲ್ಲ. ನಿಮಗೆ ಬೇಕಾದ ಸುದ್ದಿ ನಿಮ್ಮ ಬೆರಳ ತುದಿಯಲ್ಲಿಯೇ ಹಾಜರ್. ಅಂಗೈಯಲ್ಲಿ ಕನ್ನಡದ ಅರಮನೆ ಎನ್ನೋಣವೆ!

ಮೊಬೈಲ್‌ನಲ್ಲಿ ಪ್ರಾಂತೀಯ ಭಾಷೆಯಲ್ಲಿ ವಾರ್ತೆಗಳು ಲಭ್ಯವಾಗುವಂತೆ ಮಾಡಿರುವ ಒನ್‌ಇಂಡಿಯಾ ಭಾರತದಲ್ಲಿಯೇ ಮೊದಲ ಹೆಜ್ಜೆ ಇಟ್ಟಿದೆ. ಈ ವ್ಯಾಪ್ ಸೈಟ್‌ಗಳು ದೈನಂದಿನ ತಾಜಾ, ಬ್ರೇಕಿಂಗ್ ಸುದ್ದಿಗಳನ್ನಲ್ಲದೆ ಟಿವಿ ಕಾರ್ಯಕ್ರಮಗಳು, ಚಿತ್ರಮಂದಿರ, ಸಿನಿಮಾ ವಿವರಗಳು, ಆಸ್ಪತ್ರೆ, ಎಮರ್ಜೆನ್ಸಿ, ಆಂಬುಲೆನ್ಸ್, ಆಟೋ ಟ್ಯಾಕ್ಸಿ ಪ್ರವಾಸ ವಿವರಗಳನ್ನು ಸರಬರಾಜು ಮಾಡುತ್ತದೆ. ಚಿತ್ರಪ್ರೇಮಿಗಳು ಕ್ಷಣಮಾತ್ರದಲ್ಲಿ ಯಾವ ಚಿತ್ರ ಯಾವ ಚಿತ್ರಮಂದಿರದಲ್ಲಿದೆ ಎಂದು ಇದ್ದಲ್ಲಿಂದಲೇ ತಿಳಿದುಕೊಳ್ಳಬಹುದು.

A father teaching his daughter how to use internet on mobileರಾಷ್ಟ್ರೀಯ, ಅಂತಾರಾಷ್ಟ್ರೀಯ ಮನರಂಜನೆ, ಕ್ರೀಡಾಲೋಕದ ಸುದ್ದಿಗಳು ಈ ಮೊಬಿ ಸೈಟ್‌ಗಳಲ್ಲಿ ಲಭ್ಯವಿವೆ. ಟಿವಿಗೆ ಅಡಿಕ್ಟ್ ಆಗಿರುವ ಮಹಿಳಾಮಣಿಗಳು ಟಿವಿ ಕಾರ್ಯಕ್ರಮಕ್ಕಾಗಿ ಚಾಳೀಸು ಹಾಕಿ ಪೇಪರು ನೋಡುವ ಅಗತ್ಯವೇ ಇಲ್ಲ. ಕೈಯಲ್ಲಿ ಸೆಲ್ಫೋನ್ ಇದ್ದರೆ ಸಾಕು ಮೆಚ್ಚಿನ ಟಿವಿಶೋ ಪಟ್ಟಿ ಕ್ಷಣಮಾತ್ರದಲ್ಲೇ ಹಾಜರ್. ಒಟ್ಟು 6 ಪ್ರಮುಖ ಭಾರತೀಯ ನಗರಗಳ ಚಿತ್ರಮಂದಿರ, ಪ್ರದರ್ಶನಗಳ ವಿವರಗಳನ್ನು ನಮ್ಮ ಮೊಬಿ ಸೈಟ್‌ಗಳು ನೀಡುತ್ತಿವೆ. ಕೆಲಸಕ್ಕೆ ಅಲೆಯುವ ಪದವೀಧರರು ಮೊಬೈಲ್‌ನಲ್ಲೇ ಉಚಿತ ಜಾಹೀರಾತು ಪ್ರಕಟಿಸಬಹುದು. ಜಮೀನು ಮಾರಬೇಕೆ, ಕಾರು ಕೊಳ್ಳಬೇಕೆ, ಬಾಡಿಗೆಗೆ ಮನೆ ಹುಡುಕುತ್ತೀದ್ದೀರಾ? ಕೈಯಲ್ಲಿ ಮೊಬೈಲ್ ಇದ್ದರೆ ಸಾಕು.. ಅಲ್ಲಿಗೆ ಸಮಯ ಮತ್ತು ಶ್ರಮ ಉಳಿತಾಯ.

ಈ ಮುಂದೆ ನಮೂದಿಸಿದ ಯೂವುದೇ ವಿಳಾಸವನ್ನು ಆಯ್ಕೆ ಮಾಡಿಕೊಳ್ಳುವ ಮುಖಾಂತರ ಜಿಪಿಆರ್ಎಸ್ ಸೇವೆ ಇರುವ ಮೊಬೈಲ್‌ನಲ್ಲಿ ನಮ್ಮ ಸೇವೆಗಳನ್ನು ಪಡೆಯಬಹುದು : thatskannada.oneindia.mobi, oneindia.mobi, thatstelugu.oneindia.mobi, thatsmalayalam.oneindia.mobi &

ಸುದ್ದಿಗಾಗಿ ತಹತಹಿಸುವ ಗ್ರಾಹಕರಿಗೆ ಮೊಬೈಲ್‌ಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿವೆ. ಟ್ರೈ ಅಂಕಿಅಂಶಗಳ ಪ್ರಕಾರ, ಭಾರತೀಯ ಇಂಟರ್‌ನೆಟ್ ಬಳಕೆದಾರರು ಓಡಾಡುತ್ತಿರುವಾಗಲೇ ಇಂಟರ್‌ನೆಟ್ ಅನ್ನು ಬಳಸುವತ್ತ ಒಲವು ತೋರಿಸುತ್ತಿದ್ದಾರೆ. ಐವರು ಮೊಬೈಲ್ ಬಳಕೆದಾರರಲ್ಲಿ ಒಬ್ಬ ಮೊಬೈಲ್ ಮುಖಾಂತರ ಇಂಟರ್‌ನೆಟ್‌ಗೆ ಸಂಪರ್ಕ ಸಾಧಿಸುತ್ತಾನೆ ಎಂದು ಒನ್‌ಇಂಡಿಯಾ ಒಡೆತನದ ಗ್ರೇನಿಯಂ ಇನ್‌ಫರ್ಮೇಶನ್ ಟೆಕ್ನಾಲಜಿ ಲಿ.ನ ಸಿಇಓ ಬಿ.ಜಿ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

ಕಂಪ್ಯೂಟರೇ ಆಗಲಿ ಮೊಬೈಲೇ ಆಗಲಿ ಬಳಕೆದಾರರಿಗೆ ಮುಕ್ತ ಮಾಹಿತಿಯನ್ನು ನೀಡುವಲ್ಲಿ ಒನ್‌ಇಂಡಿಯಾ.ಇನ್ ಎಂದಿಗೂ ಹಿಂದೆ ಬೀಳುವುದಿಲ್ಲ ಎಂದು ಮಹೇಶ್ ಪ್ರತಿಪಾದಿಸಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಮಾರಾಟಕ್ಕಾಗಿ ಬಿಡುಗಡೆ ಮಾಡಿರುವ ಎಲ್ಲಾ ನಮೂನೆಯ ಮೊಬೈಲ್‌ಗಳಲ್ಲಿ ಭಾರತೀಯ ಭಾಷೆಗಳ ಓದುವಿಕೆ ಸುಲಭಗ್ರಾಹ್ಯವಾಗುವಂತೆ ಮೊಬಿ ಸೈಟ್‌ಗಳನ್ನು ಒನ್‌ಇಂಡಿಯಾ ಸಿದ್ಧಪಡಿಸಿದೆ. ಮುಖ್ಯವಾಗಿ ನೀವು ಬಳಸುವ ಮೊಬೈಲ್ ಫೋನಿನಲ್ಲಿ GPRS ವ್ಯವಸ್ಥೆ ಇರಬೇಕು. ಕನ್ನಡ ಫಾಂಟು (ಯೂನಿಕೋಡ್) ಇರಬೇಕು. ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ N series ಸೆಟ್ಟುಗಳಲ್ಲಿ ಯೂನಿಕೋಡ್ ವೈ ಡಿಫಾಲ್ಟ್ ಲಗತ್ತಾಗಿರುತ್ತದೆ.

ಒನ್‌ಇಂಡಿಯಾದ ಮೊಬಿ ಸೈಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
ಪ್ರಾಂತೀಯ ಭಾಷೆಯಲ್ಲಿ ಸುದ್ದಿ ಓದಲು ತೊಡಕುಂಟಾದರೆ ಸಹಾಯ ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+