ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ವಿಮಾನ ನಿಲ್ದಾಣ 2009ರಿಂದ ಕಾರ್ಯಾರಂಭ

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ಸುಮಾರು 600ಕೋಟಿ ರೂ. ವೆಚ್ಚದ ಅಂ.ರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಮತ್ತು ಪೈಲಟ್ ತರಬೇತಿ ಸಂಸ್ಥೆ ಯೋಜನೆಗಳಿಗೆ ಸಂಬಂಧಿಸಿದಂತೆ ಜ್ಯುಪಿಟರ್ ಏವಿಯೇಷನ್ ಸಂಸ್ಥೆ ಜೊತೆ ಕರ್ನಾಟಕ ಸರ್ಕಾರ ಗುರುವಾರ ಒಪ್ಪಂದ ಮಾಡಿಕೊಂಡಿದೆ.

ಈ ಬಹುನಿರೀಕ್ಷೆಯ ಹಾಸನ ವಿಮಾನ ನಿಲ್ದಾಣ, 2008ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸುಧೀರ್ ಕೃಷ್ಣ, ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಮಗಾರಿ ಪೂರ್ಣಗೊಂಡ ನಂತರ, ಪ್ರಾಯೋಗಿಕ ಹಾರಾಟ ನಡೆಯಲಿದೆ. 2009ರವೇಳೆಗೆ ನಿಲ್ದಾಣದ ಉದ್ಘಾಟನೆ ನೆರವೇರಲಿದೆ. ಇದು ಬೆಂಗಳೂರು ವಿಮಾನ ನಿಲ್ದಾಣಕ್ಕಿಂತ ದೊಡ್ಡದಾಗಿದ್ದು, 6000ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಸುಮಾರು 2500 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ತಲೆ ಎತ್ತಲಿದೆ ಎಂದು ಸುಧೀರ್ ಕೃಷ್ಣ ಹೇಳಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X