ಬೆಂಗಳೂರು : ವಿಧಾನಸೌಧದ 2ನೇ ಮಹಡಿಯಲ್ಲಿ ಬೆಂಕಿ
ಬೆಂಗಳೂರು : ವಿಧಾನಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 203ರಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದೆ.
ಶಾಸಕ ಜಿ.ಟಿ.ದೇವೇಗೌಡರ ಕೊಠಡಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಅನೇಕ ದಾಖಲೆ ಪತ್ರ, ಗಣಕ ಯಂತ್ರ ಮತ್ತಿತರ ವಸ್ತುಗಳು ಬೆಂಕಿ ಪಾಲಾಗಿವೆ. ಕೂಡಲೇ ಅಗ್ನಿ ಶಾಮಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, 1ಗಂಟೆಗೂ ಅಧಿಕ ಕಾಲ ಶ್ರಮಿಸಿ, ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿರಬಹುದು ಎನ್ನಲಾಗಿದೆ. ವಿಧಾನಸೌಧದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
(ದಟ್ಸ್ ಕನ್ನಡ ವಾರ್ತೆ )












Click it and Unblock the Notifications