ತ್ರೈಮಾಸಿಕ ವರದಿ :ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಲಾಭ ವೃದ್ಧಿ
ಬೆಂಗಳೂರು, ಜುಲೈ 17 : ಜೂನ್ 30ಕ್ಕೆ ಅಂತ್ಯಗೊಂಡ ಪ್ರಥಮ ತ್ರೈ ಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(ಟಿಸಿಎಸ್) ಸಂಸ್ಥೆ ಶೇ. 36ರಷ್ಟು ಲಾಭ ಕಂಡಿದೆ.
ಪ್ರಥಮ ತ್ರೈಮಾಸಿಕದಲ್ಲಿ ಕಂಪೆನಿಯು ಒಟ್ಟು 1,203ಕೋಟಿ ರೂ. ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷ ಇದೇ ಅವಧಿಯಲ್ಲಿ 883 ಕೋಟಿ ರೂ.ಲಾಭ ದಾಖಲಿಸಿತ್ತು.
ರೂಪಾಯಿ ಮೌಲ್ಯ ಹೆಚ್ಚಳ ಮತ್ತು ವೇತನ ಪ್ರಮಾಣ ಹೆಚ್ಚಳದ ನಡುವೆಯೂ ಲಾಭ ಗಳಿಕೆಯನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಎಸ್. ರಾಮದೊರೈ ಹೇಳಿದ್ದಾರೆ.
ಟಾಟಾ ಸಮೂಹ ಸಂಸ್ಥೆಗೆ ಸೇರಿದ ಟಿಸಿಎಸ್ ಕಂಪೆನಿ 60 ವಿವಿಧ ದೇಶಗಳ ಉದ್ಯೋಗಿಗಳನ್ನು ಹೊಂದಿದೆ. ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಸುಮಾರು 8,706 ಜನರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆ 95,000ಕ್ಕೆ ಏರಿದೆ ಹಾಗೂ 54 ಹೊಸ ಗ್ರಾಹಕರನ್ನು ಪಡೆದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications