ನೆಹರು ಮತ್ತು ಎಡ್ವಿನಾ ದೇಹವನ್ನೂ ಹಂಚಿಕೊಂಡಿದ್ದರು!
ನವದೆಹಲಿ, ಜುಲೈ 17 : ಹಾಗಂತ ಪಮೇಲಾ ಸುದ್ದಿ ಹೊರಗೆಡವಿದ್ದಾರೆ!
ಜವಾಹರಲಾಲ್ ನೆಹರು ಎಂದ ಕೂಡಲೆ ಉದ್ದನೆಯ ಕೋಟಿಗೆ ಯಾವಾಗಲೂ ಕೆಂಪು ರೋಜಾ ಹೂವನ್ನೇ ಸಿಕ್ಕಿಸಿಕೊಂಡ ಚಿತ್ರ ಕಣ್ಣಿಗೆ ಬೀಳುತ್ತದೆ. ನೆಹರುಗೆ ಮಕ್ಕಳ ಬಗ್ಗೆ ಪ್ರೀತಿಯಿದ್ದಂತೆ ಭಾರತದ ಕಡೆಯ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್‌ರ ಪತ್ನಿ ಎಡ್ವಿನಾ ಜೊತೆ ಕೂಡ ಪ್ರೇಮವಿದ್ದಿದ್ದು ಇಡೀ ಜಗತ್ತಿಗೇ ತಿಳಿದಿರುವ ವಿಚಾರ.
ಭಾರತದ ಪ್ರಪ್ರಥಮ ಪ್ರಧಾನಿ ನೆಹರು ಜೊತೆ ಎಡ್ವಿನಾಗಿದ್ದಿದ್ದು ಅತ್ಯಂತ ನಿಷ್ಕಲ್ಮಶವಾದ ಪ್ರೀತಿ, ಅಲ್ಲಿ ಲೈಂಗಿಕತೆಗೆ ಜಾಗವೇ ಇದ್ದಿದ್ದಿಲ್ಲ ಎಂದು ತನ್ನ ಇಂಡಿಯಾ ರಿಮೆಂಬರ್ಡ್ ಪುಸ್ತಕದಲ್ಲಿ ಬರೆದುಕೊಂಡಿರುವ ಎಡ್ವಿನಾ ಮೌಂಟ್‌ಬ್ಯಾಟನ್‌ರ ಕೊನೆಯ ಮಗಳು ಲೇಡಿ ಪಮೇಲಾ ಹಿಕ್ಸ್ ಈಗ ಹಕೀಕತ್ತನ್ನು ಹೊರಗೆಡಹಿದ್ದಾರೆ, ಬಿಸಿಬಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು. ಜವಾಹರ್ ಜೊತೆ ತಾಯಿ ಎಡ್ವಿನಾ ಲೈಂಗಿಕ ಸಂಪರ್ಕ ಹೊಂದಿರಬಹುದು ಎಂದು ತಾವಾಗಿಯೇ ಒಪ್ಪಿಕೊಂಡಿದ್ದು, ಪುಸ್ತಕದಲ್ಲಿನ ಮಾಹಿತಿಯ ನಿಖರತೆ ಕುರಿತು ಸಂಶಯ ಮೂಡುವಂತೆ ಮಾಡಿದ್ದಾರೆ.
ಇದನ್ನು ಮನಗಂಡಿದ್ದ ಗಂಡ ಮೌಂಟ್‌ಬ್ಯಾಟನ್ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ನೆಹರು ಅವರ ಮನವೊಲಿಸಲು ಎಡ್ವಿನಾರನ್ನು ಬಳಸಿಕೊಳ್ಳುತ್ತಿದ್ದದ್ದನ್ನು ಪಮೇಲಾ ಬಹಿರಂಗಪಡಿಸಿದ್ದಾರೆ.
ಸಿಎನ್‌ಎನ್ ಐಬಿಎನ್‌ಗಾಗಿ ಡೆವಿಲ್ಸ್ ಅಡ್ವೋಕೇಟ್ ಕಾರ್ಯಕ್ರಮದಲ್ಲಿ ಪತ್ರಕರ್ತ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲಿ ಎಡ್ವಿನಾ ಮತ್ತು ನೆಹರು ನಡುವೆ ಲೈಂಗಿಕ ಸಂಪರ್ಕವಿದ್ದಿರಬಹುದೆಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ.
ನಾನು ಮುಗ್ಧೆ ಎಂದು ಜನ ತಿಳಿಯಬಹುದು. ಆದರೆ ಅಲ್ಲ. ಅವರಿಬ್ಬರೂ ಹಾಸಿಗೆಯನ್ನು ಹಂಚಿಕೊಂಡಿದ್ದರೂ ನನಗದರಲ್ಲಿ ಆಸಕ್ತಿಯಿರಲಿಲ್ಲ. ನಾನು ನನ್ನ ಅಮ್ಮನನ್ನು ಮತ್ತು ನೆಹರು ಮಾಮನನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಎಂದು ಮನಸ್ಸನ್ನು ಬಿಚ್ಚಿಟ್ಟಿದ್ದಾರೆ.
ಅಂದ ಹಾಗೆ, ಅವರ ಈ ಸಂದರ್ಶನ ಇದೇ ಭಾನುವಾರ 22ನೇ ತಾರೀಖಿನಂದು ಪ್ರಸಾರವಾಗುತ್ತಿದೆ.
(ಯುಎನ್ಐ)
ಪೂರಕ ಓದಿಗೆ :
ಗಾಂಧೀಜಿಯಂತೆ ನೆಹರೂಗೂ ಒಬ್ಬ ಪ್ರೇಯಸಿ ಇದ್ದಳು!
ಬೀದಿಕಾಮಣ್ಣ; ನಿನ್ನ ಕೈಗೆ ಬೇಡಿ ಬೀಳಬಹುದಣ್ಣ!
ನೋ ಎಕ್ಸ್ಯೂಸ್ : ಲೈಂಗಿಕ ಕಿರುಕುಳಕ್ಕೆ ಸಾಫ್ಟ್‌ವೇರ್ ಬಾಣ!
ಸೋನು ನಿಗಮ್‌ಗೆ ಪತ್ರಕರ್ತನಿಂದ ಲೈಂಗಿಕ ಕಿರುಕುಳ?!












Click it and Unblock the Notifications