ಜುಲೈ 19 ರಂದು ರಾಷ್ಟ್ರಪತಿ ಚುನಾವಣೆ :ಅಧಿಕೃತ ಘೋಷಣೆ
ನವದೆಹಲಿ : ಜುಲೈ 19ರಂದು ರಾಷ್ಟ್ರಪತಿ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಣೆ ನೀಡಿದೆ.
ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಜೂನ್ 30ರೊಳಗೆ ಸಲ್ಲಿಸಬಹುದಾಗಿದೆ.ಜುಲೈ 2 ರಂದು ನಾಮಪತ್ರಗಳು ಪರಿಶೀಲನೆಗೊಳ್ಳಲಿದ್ದು. ಅಭ್ಯರ್ಥಿಗಳು ನಾಮಪತ್ರವನ್ನು ಜುಲೈ 4ರೊಳಗೆ ಹಿಂದುರುಗಿ ಪಡೆಯಬಹುದಾಗಿದೆ.
ಹಾಲಿ ರಾಷ್ಟ್ರಪತಿ ಅಬ್ದುಲ್ ಕಲಾಂರವರು ಕಚೇರಿಯನ್ನು ತೊರೆಯುವ 3 ದಿನ ಮೊದಲು, ಅಂದರೆ ಜುಲೈ 21ರಂದು ಮತದಾನ ಎಣಿಕೆ ಆರಂಭಗೊಳ್ಳಲಿದೆ.
ಯುಪಿಎ ಸರ್ಕಾರ ಹಾಗೂ ಎಡಪಕ್ಷಗಳ ಬೆಂಬಲ ಪಡೆದು ರಾಜಸ್ಥಾನದ ರಾಜ್ಯಪಾಲೆ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಉಪರಾಷ್ಟ್ರಪತಿ ಭೈರೋಸಿಂಗ್ ಶೆಖಾವತ್ ಎನ್ ಡಿಎ ಬೆಂಬಲದಿಂದ ಕಣಕ್ಕಿಳಿದಿದ್ದಾರೆ.
ಯಾರ ಬಳಿ ಎಷ್ಟು ಮತಗಳಿವೆ?
ಲೋಕಸಭೆಯ 543 ಸದಸ್ಯರು ಮತ್ತು ವಿವಿಧ ರಾಜ್ಯ ಗಳ ವಿಧಾನಸಭೆಯ 4,120 ಸದಸ್ಯರು ಸೇರಿದಂತೆ ,ಸಂಸತ್ತಿನ 776 ಸದಸ್ಯರ ಮತಗಳು ಸೇರಿ ಒಟ್ಟು1,0098,882 ಮತಗಳು ಎಣಿಕೆಗೆ ಬರಲಿವೆ.
ಅಧಿಕಾರದಲ್ಲಿರುವ ಯುಪಿಎ ಸರ್ಕಾರ 5.13 ಲಕ್ಷ ಮತಗಳನ್ನು ಹೊಂದಿದೆ. ಪ್ರತಿಪಕ್ಷ ಎನ್ ಡಿಎ 3.54 ಲಕ್ಷ ಮತಗಳನ್ನು ಹೊಂದಿದೆ.ಉಳಿದಂತೆ, ತೃತೀಯರಂಗ ಹಾಗೂ 8 ಪ್ರಾದೇಶಿಕ ಪಕ್ಷಗಳ ಮತಗಳ ಮೊತ್ತ 1.05 ಲಕ್ಷ ಆಗಲಿದೆ.
(ಯುಎನ್ಐ)
ಪೂರಕ ಓದಿಗೆ:
ಹಾಸ್ಯ-ವಿಡಂಬನೆ ಕೌನ ಬನೇಗ ರಾಷ್ಟ್ರಪತಿ?
ಭಾರತದ ಅತ್ಯುನ್ನತ ಹುದ್ದೆ ಮಹಿಳೆಯ ಪಾಲಿಗೆ ಸಿಗುವುದೇ?












Click it and Unblock the Notifications