ಸಂಪತ್ತಿಗೆ ಸವಾಲ್ ಎಸೆದ ಶೇಷಗಿರಿರಾವ್ ಸವಾಲು ಅಂತ್ಯ
ಬೆಂಗಳೂರು : ಸಂಪತ್ತಿಗೆ ಸವಾಲ್, ರಾಜಾ ನನ್ನ ರಾಜಾ, ಬಹದ್ದೂರ್ ಗಂಡು ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಎ.ವಿ.ಶೇಷಗಿರಿರಾವ್ ನಿಧನರಾಗಿದ್ದಾರೆ.
ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರು ಚೆನ್ನೈನಲ್ಲಿನ ತಮ್ಮ ಸ್ವಗೃಹದಲ್ಲಿ ಮಿದುಳಿನ ಆಘಾತದಿಂದ ತೀರಿಕೊಂಡಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಡಾ. ರಾಜ್‌ಕುಮಾರ್ ಅವರ ಬಹು ಯಶಸ್ಸಿನ ಚಿತ್ರ ಸಂಪತ್ತಿಗೆ ಸವಾಲ್ ಸೇರಿದಂತೆ,ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂವತ್ತಕ್ಕೂ ಅಧಿಕ ಚಿತ್ರಗಳನ್ನು ಶೇಷಗಿರಿರಾಯರು ನಿರ್ದೇಶಿಸಿದ್ದರು. ಗ್ರಾಮೀಣ ಹಿನ್ನೆಲೆ, ಸಾಮಾಜಿಕ ಹಾಗೂ ಐತಿಹಾಸಿಕ ಕಥೆಗಳನ್ನು ಉತ್ತಮವಾಗಿ ತೆರೆಗೆ ಅಳವಡಿಸುತ್ತಿದ್ದರು.
ಪಟ್ಟಣಕ್ಕೆ ಬಂದ ಪತ್ನಿಯರು, ಗುಣ ನೋಡಿ ಹೆಣ್ಣು ಕೊಡು, ಬದುಕು ಬಂಗಾರವಾಯಿರು, ಬೆಟ್ಟದ ಹುಲಿ ಇವರ ನಿರ್ದೇಶನ ಇನ್ನಿತರ ಪ್ರಮುಖ ಚಿತ್ರಗಳೆನಿಸಿವೆ.
(ಏಜನ್ಸೀಸ್)












Click it and Unblock the Notifications