ಮಾಜಿ ಪ್ರಧಾನಿ ಚಂದ್ರಶೇಖರ್ ದೇಹಸ್ಥಿತಿ ಅತಿ ಗಂಭೀರ
ನವದೆಹಲಿ : ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ದೇಹಸ್ಥಿತಿ ಗಂಭೀರವಾಗಿದೆ.
ಕಳೆದ ಒಂದು ತಿಂಗಳಿಂದ ನಗರದ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ದೇಹಸ್ಥಿತಿ, ಶುಕ್ರವಾರ ಮತ್ತಷ್ಟು ಹದಗೆಟ್ಟಿದೆ.
ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಆದರೆ ಚಿಕಿತ್ಸೆಗೆ ಚಂದ್ರಶೇಖರ್ ದೇಹಸ್ಥಿತಿ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಚಂದ್ರಶೇಖರ್ ಅವರಿಗೀಗ, 80ವರ್ಷ.
(ಏಜನ್ಸೀಸ್)











Click it and Unblock the Notifications