ಭಾರತದಲ್ಲಿ ಅಣು ಸ್ಥಾವರ ನಿರ್ಮಾಣಕ್ಕೆ ರಷ್ಯಾದ ಸಹಕಾರ
ಚೆನ್ನೈ: ತಮಿಳುನಾಡಿನ ಕುಂಡಕುಳಂ ಹಾಗೂ ಇನ್ನಿತರ ಸ್ಥಳಗಳಲ್ಲಿ ಹೊಸ ಅಣು ಸ್ಥಾವರ ಕೇಂದ್ರಗಳನ್ನು ನಿರ್ಮಾಣಕ್ಕೆರಷ್ಯಾದ ಸಹಕಾರ ದೊರೆಯಲಿದೆ. ತಮಿಳುನಾಡಿನಲ್ಲಿ ನಾಲ್ಕು ಹಾಗೂ ಇತರ ರಾಜ್ಯಗಳಲ್ಲಿ ರಿಯಾಕ್ಟರ್‌ಗಳನ್ನು ರಷ್ಯಾ ತನ್ನದೇ ತಂತ್ರಜ್ಞಾನ ಬಳಸಿ ನಿರ್ಮಿಸಿಕೊಡಲಿದೆ.
ಭಾರತ ಪ್ರವಾಸದಲ್ಲಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಅಣು ಸ್ಥಾವರಕ್ಕೆ ಸಂಬಂಧಿಸಿದ ಒಪ್ಪಂದವೂ ಸೇರಿದಂತೆ ಒಟ್ಟು 9 ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಉಪಗ್ರಹ ತಂತ್ರಜ್ಞಾನ ವ್ಯವಸ್ಥೆ , ರಕ್ಷಣೆ, ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಪರಸ್ಪರ ಸಹಕಾರ ನೀಡಿಕೆ ಕೂಡ ಸೇರಿದೆ. ಇದಲ್ಲದೇ ಸಾಂಸ್ಕೃತಿಕ ವಿನಿಮಯ ವರ್ಷ 2007-09 ಅಚರಣೆಗೆ ಒಪ್ಪಂದ ಮಾಡಿಕೊಂಡರು.
‘ಅಣು ಶಕ್ತಿಯನ್ನು ವಿಶ್ವದಲ್ಲಿ ಶಾಂತಿ ನೆಲೆಸಲು ಮಾತ್ರ ಬಳಸುವುದು ನಮ್ಮ ಉದ್ದೇಶ ’ಎಂದು ಇಬ್ಬರು ನಾಯಕರು ಜಂಟಿ ಹೇಳಿಕೆ ನೀಡಿದರು.
(ಯುಎನ್‌ಐ)











Click it and Unblock the Notifications