ವಿಪ್ರೋ ಸಂಸ್ಥೆಯ ನಿವ್ವಳ ಲಾಭ 765 ಕೋಟಿ ರೂಪಾಯಿ!

ಬೆಂಗಳೂರು : ವಿಪ್ರೋ ಸಂಸ್ಥೆ ತನ್ನ ಮೂರನೇ ತ್ರೆೃಮಾಸಿಕದ ಆದಾಯವನ್ನು ಬುಧವಾರ ಪ್ರಕಟಿಸಿದ್ದು, ಶೇಕಡಾ 45ರಷ್ಟು ವೃದ್ಧಿ ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ.

ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೆೃಮಾಸಿಕದ ಆದಾಯ 3979ಕೋಟಿ ರೂಪಾಯಿಯಾಗಿದ್ದು, ಶೇಕಡಾ 41(765ಕೋಟಿ ರೂಪಾಯಿ)ರಷ್ಟು ನಿವ್ವಳ ಲಾಭ ಗಳಿಸಿದೆ. ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸುರೇಶ್‌ ಸೇನಾಪತಿ ಮಾತನಾಡುತ್ತಾ, ಸಂಸ್ಥೆಯಲ್ಲಿ ಒಟ್ಟು 66,176ಜನ ಜನ ಉದ್ಯೋಗದಲ್ಲಿದ್ದಾರೆ. ಈ ಪೈಕಿ ಮಾಹಿತಿ ತಂತ್ರಜ್ಞಾನ ಸೇವೆ ಹಾಗೂ ಪ್ರಾಡಕ್ಟ್ಸ್‌ ಬಿಸಿನೆಸ್‌ನಲ್ಲಿ 49,313 ಜನ ಕಾರ್ಯ ನಿರ್ವಹಿಸುತ್ತಿದ್ದು, 16,863 ಜನ ಹೊರಗುತ್ತಿಗೆ(ಬಿಪಿಓ) ಸೇವಾ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+