ತರಗತಿಯಲ್ಲಿ ಮಕ್ಕಳಿಗಿನ್ನು ಶಿಕ್ಷಕರು ಹೊಡೆಯುವಂತಿಲ್ಲ!
ಚೆನ್ನೈ : ಮಕ್ಕಳಿಗಿನ್ನು ಹೊಡೆದು-ಬಡಿದು ಶಾಲೆಯಲ್ಲಿ ಪಾಠ ಹೇಳಿಕೊಡುವಂತಿಲ್ಲ. ತಮಿಳುನಾಡು ಸರ್ಕಾರ, ಈ ಕುರಿತು ಆದೇಶ ಹೊರಡಿಸಿದೆ.
ಮಕ್ಕಳಿಗೆ ದೈಹಿಕ ಶಿಕ್ಷೆ, ಕೋಲಿನಿಂದ ಹೊಡೆಯುವುದು ಇವೆಲ್ಲವನ್ನು ಶಿಕ್ಷಕರು ಕೈಬಿಡಬೇಕಾಗಿದೆ. ಎ.ಮುತ್ತು ಕೃಷ್ಣನ್ ನೇತೃತ್ವದ ಸಮಿತಿ ನೀಡಿದ ಶಿಫಾರಸಿನಂತೆ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಶಿಕ್ಷಕರು ನೀಡುವ ಹಿಂಸೆಗಳನ್ನು ನಿಷೇಧಿಸಿದೆ.
ಪೋಷಕರ ಒತ್ತಾಯದ ಮೇರೆಗೆ ಈ ಸಮಿತಿಯನ್ನು ರಚಿಸಲಾಗಿತ್ತು. ಶಿಕ್ಷಕರ ಹಿಂಸೆಗೆ ಹೆದರಿ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.
ಸರ್ಕಾರದ ಆದೇಶ ಕಂಡು ಮಕ್ಕಳಿಗಂತೂ ಖುಷಿಯಾಗಿದೆ. ತರಗತಿಯಲ್ಲಿ ಮಂಗಾಟವಾಡುವ ಮಕ್ಕಳಿಗೆ ಹೇಗಪ್ಪಾ ಕಡಿವಾಣ ಹಾಕೋದು ಎನ್ನುವ ಚಿಂತೆ ಶಿಕ್ಷಕರಲ್ಲಿದೆ.
(ಏಜನ್ಸೀಸ್)











Click it and Unblock the Notifications