ಮಡಿಕೇರಿ : ಕುಡುಕ ಗಂಡನ ಕೊಂದ ಹೆಂಡತಿಗೆ ಜೈಲು!
ಮಡಿಕೇರಿ : ಗಂಡನನ್ನು ಕೊಲೆಗೈದ ಹೆಂಡತಿಯೋರ್ವಳಿಗೆ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೀವಾವಧಿ ಶಿಕ್ಷೆಯಲ್ಲದೆ 2000ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಶಿಕ್ಷೆಗೊಳಗಾದ ಮಹಿಳೆ ಕಮಲಾ ಎಸ್ಟೇಟ್ ಒಂದರ ಉದ್ಯೋಗಿಯಾಗಿದ್ದು, 2003ರಲ್ಲಿ ತನ್ನ ಪತಿ ನಾಗ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ್ದಳು.
ಕೊಲೆಯ ಹಿನ್ನೆಲೆ : ಸೋಮವಾರಪೇಟೆ ತಾಲ್ಲೂಕಿನ ಅಟ್ಟೂರ್ ನಲ್ಲೂರು ಗ್ರಾಮದ ಎಸ್ಟೇಟ್‌ನ ಮನೆಯಾಂದರಲ್ಲಿ ನಾಗ ಮತ್ತು ಕಮಲಾ ವಾಸವಾಗಿದ್ದರು. ನಾಗ ಆಗಾಗ ಕುಡಿದುಬಂದು ಕಮಲಾಳೊಂದಿಗೆ ಜಗಳಕ್ಕಿಳಿಯುತ್ತಿದ್ದ. ಒಂದು ದಿನ ತಾಳ್ಮೆ ಕಳೆದುಕೊಂಡ ಮಹಿಳೆ, ಆತನ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಳು.ನಂತರ ಆಕೆ, ಗಂಡನ ದೇಹವನ್ನೂ ಸುಟ್ಟು ಹಾಕಿದ್ದಳು.
(ಯುಎನ್‌ಐ)











Click it and Unblock the Notifications