ಜ.18ರಿಂದ ಯಂತ್ರೋಪಕರಣಗಳ ಬೃಹತ್ ಪ್ರದರ್ಶನ
ಬೆಂಗಳೂರು : ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಬೃಹತ್ ಯಂತ್ರೋಪಕರಣ ಹಾಗೂ ಸಲಕರಣೆಗಳ ಪ್ರದರ್ಶನ(IMTEX-07) ನಗರದಲ್ಲಿ ಜನವರಿ 18 ರಿಂದ 24ರವರೆಗೂ ನಡೆಯಲಿದೆ.
ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್(ICҩನಲ್ಲಿ ಪ್ರದರ್ಶನ ನಡೆಯಲಿದೆ. ಭಾರತೀಯ ಯಾಂತ್ರಿಕ ಸಲಕರಣೆ ಉತ್ಪಾದಕರ ಸಂಸ್ಥೆ (ಐಎಂಟಿಎಂಎ) ಈ ಪ್ರದರ್ಶನವನ್ನು ಅಯೋಜಿಸಿದೆ.
ಚೈನಾ, ಜರ್ಮನಿ, ಸ್ಪೇನ್, ಫ್ರಾನ್ಸ್, ಇಸ್ರೇಲ್ ಸೇರಿದಂತೆ ಸುಮಾರು 25 ದೇಶಗಳ 1,163ಕ್ಕೂ ಕಂಪನಿಗಳು, ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕಮಲ ನಾಥ್ ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಪ್ರದರ್ಶನದಲ್ಲಿ ಇಡಲಾಗುವ ಯಂತ್ರಗಳ ಬೆಲೆ ಸುಮಾರು 300 ಕೋಟಿ. ಈ ಪ್ರದರ್ಶನದ ಮೂಲಕ ಸ್ಥಳೀಯ ಯಂತ್ರೋಪಕರಣಗಳು ವಿಶ್ವ ಮಾರುಕಟ್ಟೆ ಪ್ರವೇಶ ಪಡೆಯಲು ಅವಕಾಶ ತೊರೆದಂತಾಗುತ್ತದೆ ಎಂದು ಪ್ರದರ್ಶನದ ವ್ಯವಸ್ಥಾಪಕರಲ್ಲಿ ಒಬ್ಬರಾದ ಶೈಲೇಶ್ ಸೇಥ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications