ಮೂರು ದಿನಗಳ ‘ಫಾಸ್ ಡಾಟ್ ಇನ್-2006’ ಆರಂಭ
ಬೆಂಗಳೂರು : ಫ್ರೀ ಓಪನ್ ಸೋರ್ಸ್ ಸಾಫ್ಟ್‌ವೇರ್(ಫಾಸ್)ಗೆ ಸಂಬಂಧಿಸಿದ ಭಾರತದ ಅತಿ ಗಮನಾರ್ಹ ಹಾಗೂ ಬೃಹತ್ ಸಮ್ಮೇಳನ ‘ಫಾಸ್ ಡಾಟ್ ಇನ್-2006’ ಶುಕ್ರವಾರ ನಗರದಲ್ಲಿ ಆರಂಭವಾಯಿತು.
ಸಮ್ಮೇಳನದ ಮುಖ್ಯ ಪ್ರಾಯೋಜಕತ್ವ ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕ ಸಚಿವಾಲಯದ್ದು. ಒಟ್ಟು ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ, ಓಪನ್ ಸೋರ್ಸ್ ಸಮುದಾಯ ಈ ಕ್ಷೇತ್ರದಲ್ಲಾದ ಹೊಸ ಬೆಳವಣಿಗೆಗಳು ಹಾಗೂ ಭವಿಷ್ಯದ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ನಡೆಸಲಿದೆ.
1999ರಲ್ಲಿ ‘ಬೆಂಗಳೂರು ಐಟಿ ಡಾಟ್ ಕಾಮ್’ನ ಭಾಗವಾಗಿ ಆರಂಭವಾದ ಕಾರ್ಯಕ್ರಮ, ಸದ್ಯಕ್ಕೆ ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನೆಲ್ಲೆಡೆ ಗಮನ ಸೆಳೆದಿದೆ.
(ಯುಎನ್‌ಐ)











Click it and Unblock the Notifications