ಬಿಎಂಪಿ ಆಡಳಿತಾಧಿಕಾರಿಯಾಗಿ ದಿಲೀಪ್ ರಾವ್ ನೇಮಕ
ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಪಿ) ಆಡಳಿತಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ದಿಲೀಪ್ ರಾವ್ ಅವರನ್ನು ಸರ್ಕಾರ ಗುರುವಾರ ನೇಮಕ ಮಾಡಿದೆ.
ಪಾಲಿಕೆಯ ಮೇಯರ್ ಮಮ್ತಾಜ್ ಬೇಗಂ ಅವರ ಅಧಿಕಾರವಧಿ ಗುರುವಾರ ರಾತ್ರಿಗೆ ಅಂತ್ಯಗೊಂಡಿದೆ. ಪಾಲಿಕೆ ಹೊಸ ಅಧ್ಯಕ್ಷರ ಆಯ್ಕೆಯ ಚುನಾವಣೆಯನ್ನು ಸರ್ಕಾರ ‘ಗ್ರೇಟರ್ ಬೆಂಗಳೂರು’ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ಮುಂದೂಡಿದೆ.
ಪ್ರಸ್ತುತ ಇಂಧನ ಇಲಾಖೆ ಕಾರ್ಯದರ್ಶಿಯಾಗಿರುವ ದಿಲೀಪ್ ರಾವ್, ಹೆಚ್ಚುವರಿಯಾಗಿ ಬಿಎಂಪಿ ಆಡಳಿತಾಧಿಕಾರಿ ಹುದ್ದೆಯನ್ನು ನಿರ್ವಹಿಸುವರು.
(ದಟ್ಸ್ ಕನ್ನಡ ವಾರ್ತೆ )












Click it and Unblock the Notifications