ದಾವಣಗೆರೆ : ಮಧ್ಯರಾತ್ರಿ ಮನೆ ಕುಸಿದು ಮೂರು ಸಾವು
ದಾವಣಗೆರೆ : ಮನೆ ಕುಸಿತದಿಂದ ನವಜಾತ ಗಂಡು ಶಿಶು ಸೇರಿದಂತೆ, ಮೂರು ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ವರದಿಯಾಗಿದೆ. ಮಳೆಯ ಪರಿಣಾಮ ಮನೆಯ ಚಾವಣಿ ಶಿಥಿಲಗೊಂಡಿತ್ತು.
ದಾವಣಗೆರೆಗೆ ಹದಿನೈದು ಕಿ.ಮೀ. ದೂರದಲ್ಲಿರುವ ಹರಿಹರದಲ್ಲಿ ಸಂಭವಿಸಿರುವ ಈ ದುರ್ಘಟನೆಯಲ್ಲಿ, 8ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಮತ್ತು ಹರಿಹರ ಆಸ್ಪ ತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ದುರಂತ ಸಂಭವಿಸಿದ ಸಮಯ(ಮಂಗಳವಾರ ಮಧ್ಯರಾತ್ರಿ 2.30)ದಲ್ಲಿ ಎಲ್ಲರೂ ಮಲಗಿದ್ದರು. ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದೆ. ಮೃತರನ್ನು ಸಬೀನಾ ಬಾನು(26), ಆಕೆಯ ಪುತ್ರಿ ಸೋಫಿ(3) ಎಂದು ಗುರ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್‌ಐ)












Click it and Unblock the Notifications