ಲವ್ ಫಿವರ್ : ಕಾಲ್ ಸೆಂಟರ್ ಉದ್ಯೋಗಿಯ ಆತ್ಮಹತ್ಯೆ!
ಬೆಂಗಳೂರು : ತನ್ನ ಪ್ರೇಯಸಿ, ಇನ್ನೊಬ್ಬ ಯುವಕನ ಜೊತೆ ಸುತ್ತಾಡುವುದನ್ನು ಸಹಿಸದ ಪ್ರೇಮಿಯಾಬ್ಬ, ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತನನ್ನು ಸುನಿಲ್ ಕಾರಡಗಿ(26) ಎಂದು ಗುರ್ತಿಸಲಾಗಿದೆ. ಎಚ್‌ಎಸ್‌ಬಿಸಿ ಕಾಲ್‌ಸೆಂಟರ್‌ನ ಉದ್ಯೋಗಿಯಾಗಿದ್ದ ಈತ, ಹುಬ್ಬಳ್ಳಿ ಮೂಲದವನು.
ಮೈಕೋ ಲೇ ಔಟ್ ಬಳಿಯ ಅರಕೆರೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ಸುನಿಲ್, ಶನಿವಾರ ಮಧ್ಯರಾತ್ರಿ, ತನ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ.
ಎರಡು ದಿನಗಳಿಂದ ದಿನ ಪತ್ರಿಕೆಗಳು ಕೊಠಡಿ ಮುಂದೆ ಬಿದ್ದಿರುವುದನ್ನು ಕಂಡು, ಅನುಮಾನದಿಂದ ಮನೆ ಮಾಲೀಕರು ಬಾಗಿಲು ಮುರಿದು, ಒಳ ಪ್ರವೇಶಿಸಿದರು. ಆಗ ಆತ್ಮಹತ್ಯೆವಿಷಯ ಬಯಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications