ಗುರೂಜಿ : ಗೂಗಲ್‌ನಂತೆ ಇನ್ನೊಂದು ಸರ್ಜ್ ಇಂಜಿನ್!
ಬೆಂಗಳೂರು : ಗೂಗಲ್, ಯಾಹೂ ಸರ್ಜ್ ಇಂಜಿನ್ ಮಾದರಿಯಲ್ಲಿಯೇ, ಮೊದಲ ದೇಶೀಯ ಸರ್ಜ್ ಇಂಜಿನ್ ಆರಂಭಗೊಂಡಿದೆ. ಅದರ ಹೆಸರು http://www.guruji.com.
ದೆಹಲಿಯ ಐಜಿಟಿಯ ವಿದ್ಯಾರ್ಥಿಗಳಾದ ಅನುರಾಗ್ ದೋಡ್ ಮತ್ತು ಗೌರವ್ ಮಿಶ್ರಾ, ಈ ಸರ್ಜ್ ಇಂಜಿನ್ ರೂಪಿಸಿದ್ದಾರೆ. ಭಾರತೀಯ ವೆಬ್ ಗ್ರಾಹಕರಿಗೆ ಇದು ಅನುಕೂಲಕರ. ಇದರಲ್ಲಿ ಭಾರತ ಮತ್ತು ಲೋಕಲ್ ಎಂಬ ವಿಭಾಗಗಳಿವೆ. ಮೊದಲ ವಿಭಾಗದಲ್ಲಿ ಭಾರತದ ಎಲ್ಲಾ ವೆಬ್‌ಸೈಟ್‌ಗಳು, ಎರಡನೇ ವಿಭಾಗದಲ್ಲಿ ಊರು, ಸಂಸ್ಥೆಗಳ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿ ಲಭ್ಯ.
ಪ್ರಸ್ತುತ ಭಾರತದಲ್ಲಿ 6.5ಕೋಟಿ ಜನರು ಅಂತರ್ಜಾಲ ಬಳಸುತ್ತಿದ್ದಾರೆ. ಮುಂದಿನ 4-5ವರ್ಷಗಳಲ್ಲಿ ಶೇ.40ರಷ್ಟು ಜನ ಅಂತರ್ಜಾಲ ಬಳಸುತ್ತಾರೆ ಎಂಬ ಅಂದಾಜಿದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಗುರೂಜಿ ಡಾಚ್‌ಕಾಂ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications