ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಕಡ್ಡಾಯ
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಕಡ್ಡಾಯ
ಯೋಗಕ್ಕೆ 20 ಅಂಕ ನಿಗದಿ, ಪ್ರತಿ ತರಗತಿಗೂ ವಿಭಿನ್ನ ಆಸನಗಳು
2006-07ನೇ ಸಾಲಿನಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಕಡ್ಡಾಯಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಸಂಸ್ಥೆ(ಡಿಎಸ್‌ಇಆರ್‌ಟಿ) ಸಾಧನಾ ಪಥ ಎಂಬ ಕೈಪಿಡಿ ಅಭಿವೃದ್ಧಿಪಡಿಸಿದೆ. ಪ್ರೌಢಶಾಲಾ ಶಿಕ್ಷಕರು ಅನುಸರಿಸಬೇಕಾದ ನಿಯಮಗಳು ಈ ಕೈಪಿಡಿಯಲ್ಲಿವೆ.
ಎಂಟನೇ ತರಗತಿ ವಿದ್ಯಾರ್ಥಿಗಳಿಗೆ 24, ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ 34 ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 43 ಆಸನಗಳನ್ನು ನಿಗದಿಪಡಿಸಲಾಗಿದ್ದು, ಪ್ರತಿ ತರಗತಿಗೂ ಬೇರೆ ಬೇರೆ ಆಸನಗಳನ್ನು ಪಟ್ಟಿ ಮಾಡಲಾಗಿದೆ. ಅಲ್ಲದೆ ಲಘು ವ್ಯಾಯಾಮ, ಸೂರ್ಯ ನಮಸ್ಕಾರ ಹಾಗೂ ಉಸಿರಾಟ ಕ್ರಿಯೆಗಳನ್ನು ಎಲ್ಲ ತರಗತಿ ವಿದ್ಯಾರ್ಥಿಗಳಿಗೂ ಕಡ್ಡಾಯಗೊಳಿಸಲಾಗಿದೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications