ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ಗೆ ದಾಖಲೆ ಆದಾಯ
ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ಗೆ ದಾಖಲೆ ಆದಾಯ
27.27ಕೋಟಿ ರೂಪಾಯಿ ನಿವ್ವಳ ಲಾಭ, 90 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಠೇವಣಿ ಸಂಗ್ರಹ
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬ್ಯಾಂಕು 2005-06ನೇ ಹಣಕಾಸು ವರ್ಷದಲ್ಲಿ ಒಟ್ಟು 3,500ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದು, 27.27ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದರು.
ಲಾಭದ ಜೊತೆಗೆ ಬ್ಯಾಂಕ್ 2,262ಕೋಟಿ ರೂಪಾಯಿ ಡಿಪಾಸಿಟ್ ಸಂಗ್ರಹಿಸಿದೆ. ಇದು 90 ವರ್ಷಗಳ ಇತಿಹಾಸವುಳ್ಳ ಬ್ಯಾಂಕಿನ ಮತ್ತೊಂದು ಸಾಧನೆಯಾಗಿದೆ ಎಂದು ರಾಜೇಂದ್ರ ಕುಮಾರ್ ವಿವರಿಸಿದರು.
ಈ ಅವಧಿಯಲ್ಲಿ, 21ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಹಾಗೂ 4,587 ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ, 1,762.52ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಇದರ ಪೈಕಿ 1,111.88ಕೋಟಿ ರೂಪಾಯಿಗಳನ್ನು ಕೃಷಿಗಾಗಿಯೇ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
(ಯುಎನ್‌ಐ)
ಮುಖಪುಟ / ವಾರ್ತೆಗಳು











Click it and Unblock the Notifications