ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಅರ್ಥ ಶಾಸ್ತ್ರಜ್ಞ ನಂಜುಂಡಪ್ಪ ನಿಧನ

By Staff
|
Google Oneindia Kannada News

ಖ್ಯಾತ ಅರ್ಥ ಶಾಸ್ತ್ರಜ್ಞ ನಂಜುಂಡಪ್ಪ ನಿಧನ
ತಮ್ಮ ಸಾಧನೆ ಮತ್ತು ಸೇವೆಯ ಮೂಲಕ ರಾಜ್ಯ ಮತ್ತು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದ ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ಇನ್ನು ನೆನಪು ಮಾತ್ರ ...

ಬೆಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಮತ್ತು ಆಡಳಿತ ತಜ್ಞ ಡಾ.ಡಿ.ಎಂ.ನಂಜುಂಡಪ್ಪ(74) ಸೋಮವಾರ ನಿಧನರಾದರು.

ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಮೂವರು ಪುತ್ರಿಯರು ಮತ್ತು ಪತ್ನಿಯನ್ನು ಅವರು ಅಗಲಿದ್ದಾರೆ.

ಇಂಡಿಯನ್‌ ಕೌನ್ಸಿಲ್‌ ಆಫ್‌ ಸೋಸಿಯಲ್‌ ಸೈನ್ಸ್‌ ರಿಸರ್ಚ್‌ನ ಅಧ್ಯಕ್ಷರಾಗಿ ಅವರು ಈ ಹಿಂದೆ ಸೇವೆಸಲ್ಲಿಸಿದ್ದರು. ಧಾರವಾಡ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಉಪ-ಕುಲಪತಿಯಾಗಿ, ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

ರೈಲ್ವೆ ಇಲಾಖೆಯ ತೆರಿಗೆ ಸಮಿತಿ ಅಧ್ಯಕ್ಷರಾಗಿ 1991ರಿಂದ 93ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು. 1994ರಿಂದ 2000 ಅವಧಿಯಲ್ಲಿ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ, 1984-87ರವರೆಗೆ ರಾಜ್ಯ ಸಾಂಸ್ಥಿಕ ಹಣಕಾಸು ಕಾರ್ಯದರ್ಶಿಯಾಗಿ ನಂಜುಂಡಪ್ಪ ಸೇವೆ ಸಲ್ಲಿಸಿದ್ದರು.

ಚಿತ್ರದುರ್ಗ ಜಿಲ್ಲೆಯ ದೊಗ್ಗನಹಾಲ್‌ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಅವರು, ‘ಭಾರತದಲ್ಲಿ ಆರ್ಥಿಕ ನೀತಿ ಮತ್ತು ಸಂಪೂರ್ಣ ಉದ್ಯೋಗ’ ವಿಷಯದಲ್ಲಿ ಡಾಕ್ಟರೇಟ್‌ ಪಡೆದಿದ್ದರು.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅವರು ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಡಾಕ್ಟರೇಟ್‌ ಪದವಿಗಳನ್ನು ತಮ್ಮ ಮಡಿಲಿಗೆ ಸೇರಿಸಿಕೊಂಡಿದ್ದರು. ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೋ. ಜೆ.ಕೆ. ಗ್ಯಾಲ್‌ಬ್ರೆೃಥ್‌ ಸೇರಿದಂತೆ ವಿವಿಧ ಖ್ಯಾತ ನಾಮರೊಂದಿಗೆ ನಂಜುಂಡಪ್ಪ ಕೆಲಸ ಮಾಡಿದ್ದರು.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರು, ನಂಜುಂಡಪ್ಪ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ಅವರ ಸೇವೆ ಶ್ಲಾಘನೀಯ ಎಂದು ಧರ್ಮಸಿಂಗ್‌ ಸ್ಮರಿಸಿದ್ದಾರೆ.

(ಪಿಟಿಐ)

ಪೂರಕ ಓದಿಗೆ :

  • ಡಾ.ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಪಾಪು ಆಗ್ರಹ

  • ಡಿ.ಎಂ.ನಂಜುಂಡಪ್ಪ ಸಮಿತಿಯ ಮಹತ್ವದ ಶಿಫಾರಸ್ಸುಗಳು ಕೃಷ್ಣ ಟೇಬಲ್‌ಗೆ
  • ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X