ಲಾಲ್‌ಬಾಗ್ ರಂಗಿಗೆ 9ಕೋಟಿ, ಪರಿಸರ ಪ್ರಿಯರಿಗೆ ಹರ್ಷ
ಲಾಲ್‌ಬಾಗ್ ರಂಗಿಗೆ 9ಕೋಟಿ, ಪರಿಸರ ಪ್ರಿಯರಿಗೆ ಹರ್ಷ
ಕೆಂಪು ತೋಟದಲ್ಲಿ ರಾಕ್ ಗಾರ್ಡನ್, ಕೃತಕ ಜಲಪಾತ, ಫುಡ್ ಕೋರ್ಟ್... ಇತ್ಯಾದಿ ಇತ್ಯಾದಿ
ಮುಂದಿನ ಮೂರು ತಿಂಗಳಲ್ಲಿ ಯೋಜನೆಯ ಕಾಮಗಾರಿ ಆರಂಭಗೊಳ್ಳಲಿದೆ. ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಈ ಯೋಜನೆಯಲ್ಲಿ, ಲಾಲ್‌ಬಾಗ್ ಮಣ್ಣಿನ ರಸ್ತೆ ಸುಧಾರಣೆ, ಉಪನ್ಯಾಸ ಸಭಾಂಗಣ, ಗಾಜಿನ ಮನೆಯ ಸುತ್ತ ಅಲಂಕಾರಿಕ ಗ್ರಿಲ್ ವರ್ಕ್, ರಾಕ್ ಗಾರ್ಡನ್, ಕೃತಕ ಜಲಪಾತ ನಿರ್ಮಾಣ, ಮತ್ಸ್ಯಾಲಯ ನವೀಕರಣ ಮತ್ತಿತರ ಕಾಮಗಾರಿಗಳೂ ಸೇರಿವೆ.
ಅಲ್ಲದೇ ಸಣ್ಣ ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಯುವುದು, ಮಳೆ ನೀರು ಕೊಯ್ಲು, ಈಗಿರುವ ಕಚೇರಿಕಟ್ಟಡಗಳ ರಿಪೇರಿ ಮತ್ತು ಮರು ನಿರ್ಮಾಣ, ಈಗಿರುವ ಗೇಟುಗಳನ್ನು ಬದಲಿಸುವುದು ಯೋಜನೆಯಲ್ಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications