ರಾಜ್ಯದಿ ಜೆಡಿ(ಯು)ನ ‘ಬಾಣ’ ಮುರಿದ ಚು.ಆಯೋಗ

ರಾಜ್ಯದಿ ಜೆಡಿ(ಯು)ನ ‘ಬಾಣ’ ಮುರಿದ ಚು.ಆಯೋಗ
ಚುನಾವಣಾ ಆಯೋಗಕ್ಕೆ ಮೇಲ್ಮನವಿ -ಸೋಮಶೇಖರ್‌

ಬೆಂಗಳೂರು : ಕರ್ನಾಟಕ ರಾಜ್ಯದ ಅಧಿಕೃತ ರಾಜಕೀಯ ಪಕ್ಷ ಎನ್ನುವ ಮಾನ್ಯತೆಯನ್ನು ಸಂಯುಕ್ತ ಜನತಾದಳ(ಜೆಡಿ-ಯು) ಕಳೆದು ಕೊಂಡಿದೆ.

ಕಳೆದ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಕಳಪೆ ಸಾಧನೆಯನ್ನು ಗಮನಿಸಿರುವ ಕೇಂದ್ರ ಚುನಾವಣಾ ಆಯೋಗ ಈ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಿದೆ. ಆದರೆ ಬಿಹಾರ, ಜಾರ್ಖಂಡ್‌ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಅದರ ಜೆಡಿ-ಯು ಸ್ಥಾನಮಾನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪುನರ್‌ ಪರಿಶೀಲನೆಗೆ ಮೇಲ್ಮನವಿ ಸಲ್ಲಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಸೋಮಶೇಖರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏನಿದು ರಾಜ್ಯ ಪಕ್ಷದ ಮಾನ್ಯತೆ ? : ಅಧಿಕೃತ ರಾಜ್ಯ ಪಕ್ಷದ ಸ್ಥಾನಮಾನ ಉಳಿಸಿಕೊಳ್ಳಲು, ರಾಜಕೀಯ ಪಕ್ಷಗಳು ಇಬ್ಬರು ಶಾಸಕರು ಮತ್ತು ಒಬ್ಬ ಸಂಸದರನ್ನು ಹೊಂದಿರ ಬೇಕು. ಅಲ್ಲದೇ ಒಟ್ಟು ಮತದಾರರಲ್ಲಿ ಕನಿಷ್ಠ ಶೇ.6ರಷ್ಟು ಮತಗಳನ್ನು ಪಡೆದಿರಬೇಕು.

ರಾಜ್ಯದಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಐದು ಸ್ಥಾನ ಪಡೆದಿದ್ದ ಜೆಡಿ-ಯು, ಲೋಕಸಭೆ ಚುನಾವಣೆಯಲ್ಲಿ ಖಾತೆಯನ್ನೇ ತೆರೆದಿರಲಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+