ಏಳು ರಾಷ್ಟ್ರೀಯ ಹೆದ್ದಾರಿಗಳಿಗೆ ಮೇಲ್ದರ್ಜೆ ಯೋಗ
ಏಳು ರಾಷ್ಟ್ರೀಯ ಹೆದ್ದಾರಿಗಳಿಗೆ ಮೇಲ್ದರ್ಜೆ ಯೋಗ
ಜಿಲ್ಲಾ ರಸ್ತೆಗಳ ದುರಸ್ಥಿಗಾಗಿ 455ಕೋಟಿರೂ.ಗಳ ಪ್ಯಾಕೇಜ್ -ಹೆಚ್.ಡಿ.ರೇವಣ್ಣ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ರಾ.ಹೆದ್ದಾರಿಗಳನ್ನು 2005-06ನೇ ಸಾಲಿನಲ್ಲಿ 2,545 ಕೋಟಿ ವೆಚ್ಚದಲ್ಲಿ ನಾಲ್ಕು ಪಥದಿಂದ ಆರು ಅಥವಾ ಎಂಟು ಪಥಕ್ಕೆ ಪರಿವರ್ತಿಸುವ ಯೋಜನೆ ರೂಪಿಸಿರುವುದಾಗಿ ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಗಳ ಪ್ರಮುಖ ರಸ್ತೆಗಳ ದುರಸ್ಥಿ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕಾಗಿ ರೂಪಿಸಿರುವ 455ಕೋಟಿರೂ.ಗಳ ಪ್ಯಾಕೇಜ್‌ಗೆ ಅನುಮೋದನೆ ದೊರೆತಿದೆ ಎಂದು ರೇವಣ್ಣ ಹೇಳಿದರು.
ಮೇಲ್ದರ್ಜೆಗೇರುವ ರಾಷ್ಟ್ರೀಯ ಹೆದ್ದಾರಿಗಳ ವಿವರ :
- ಬೆಂಗಳೂರು-ಹೊಸೂರು ರಸ್ತೆ(16ಕಿ.ಮೀ, ಆರು ಪಥ, 625ಕೋಟಿ)
- ಬೆಂಗಳೂರು-ನೆಲಮಂಗಲ ರಸ್ತೆ(19.5ಕಿ.ಮೀ, ಆರು ಪಥ, 400ಕೋಟಿ)
- ಬೆಂಗಳೂರು-ಬಾಗೇಪಲ್ಲಿ ರಸ್ತೆ(94ಕಿ.ಮೀ, ಎಂಟು ಪಥ)
- ಚೆನ್ನೈ-ಕೋಲಾರ-ಬೆಂಗಳೂರು ನಡುವಿನ ರಸ್ತೆ(107ಕಿ.ಮೀ, ಆರು ಪಥ, 400ಕೋಟಿ),
- ನೆಲಮಂಗಲ-ಹಾಸನ ರಸ್ತೆ (157ಕಿ.ಮೀ, ನಾಲ್ಕುಪಥ, 620ಕೋಟಿ)
- ಬಿಜಾಪುರ-ಚಿತ್ರದುರ್ಗ ರಸ್ತೆ (390ಕಿ.ಮೀ, ನಾಲ್ಕುಪಥ)
- ಮಂಗಳೂರು-ಪಣಜಿ ರಸ್ತೆ (74ಕಿ.ಮೀ, ನಾಲ್ಕುಪಥ, 500ಕೋಟಿ)
ಮುಖಪುಟ / ವಾರ್ತೆಗಳು












Click it and Unblock the Notifications