• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾರ್ಲ್ಸ್‌-ಕ್ಯಾಮಿಲಾ ಮದುವೆಗೆ ಡಬ್ಬಾವಾಲಗಳು!

By Super
|

ಚಾರ್ಲ್ಸ್‌-ಕ್ಯಾಮಿಲಾ ಮದುವೆಗೆ ಡಬ್ಬಾವಾಲಗಳು! ಶ್ರಮಜೀವಿಗಳ ಬದುಕಿಗೆ ಬ್ರಿಟನ್‌ ರಾಜಕುಮಾರನ ಕೊಡುಗೆ ಮುಂಬಯಿ ಡಬ್ಬಾವಾಲಗಳಿಗೆ ರಾಜಕುಮಾರ ಚಾರ್ಲ್ಸ್‌ ಮತ್ತು ಕ್ಯಾಮಿಲಾ ಪಾರ್ಕರ್‌ ಅವರ ಮದುವೆಯ ಆಹ್ವಾನ ಪತ್ರಿಕೆ, ಆದರದ ಕರೆಯೋಲೆ ಬಂದಿದ್ದು ಅಚ್ಚರಿಯಾದರೂ ಸತ್ಯ.

ಕೆಲವೇ ದಿನಗಳ ಹಿಂದೆ ವಿಶ್ವೇಶ್ವರ ಭಟ್‌ ಅವರ ಅಂಕಣದಲ್ಲಿ ಮುಂಬಯಿನ ಡಬ್ಬಾವಾಲಾಗಳ ಕಾರ್ಯ ವೈಖರಿಯ, ಕಷ್ಟ ಸುಖಗಳ, ಅದ್ಭುತ ಆಡಳಿತ ನಿರ್ವಹಣೆ, ಸರಳ ಸಂಘಟನೆಯ ಬಗ್ಗೆಯ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿತ್ತು. ಇದೇ ಡಬ್ಬಾವಾಲಗಳಿಗೆ ರಾಜಕುಮಾರ ಚಾರ್ಲ್ಸ್‌ ಮತ್ತು ಕ್ಯಾಮಿಲಾ ಪಾರ್ಕರ್‌ ಅವರ ಮದುವೆಯ ಆಹ್ವಾನ ಪತ್ರಿಕೆ, ಆದರದ ಕರೆಯೋಲೆ ಸಿಕ್ಕಿದ್ದು ನಿಜಕ್ಕೂ ಅದ್ಭುತ.

ನೂತನ್‌ ಟಿಫಿನ್‌ ಬಾಕ್ಸ್‌ ಅಸೋಸಿಯೇಷನ್‌ ಸಂಘದ ಡಬ್ಬಾವಾಲಗಳಿಗೆ ಬರುವ ಯುಗಾದಿ (ಗುಡಿಪಾಡ್ವ)ಯ ಸಂಭ್ರಮ, ಸಂತೋಷದೊಡನೆ ರಾಜಕುಮಾರ ಚಾರ್ಲ್ಸ್‌ ಮತ್ತು ಕ್ಯಾಮಿಲಾ ಪಾರ್ಕರ್‌ ಮದುವೆಯ ಕರೆಯೋಲೆ ಹೊಸ ಸಂಭ್ರಮ ತಂದಿದೆ.

ಡಬ್ಬಾವಾಲಗಳ ಸಂಘದ ಪರವಾಗಿ ಮುಂಬಯಿ ಟಿಫಿನ್‌ ಬಾಕ್ಸ್‌ ಅಸೋಸಿಯೇಷನ್‌ನ ಅಂಧೇರಿ, ಕಾರ್ಯಾಲಯದ ಅಧ್ಯಕ್ಷರಾದ ರಘುನಾಥ ಮೇಡ್ಗೆ ಮತ್ತು ಕಾರ್ಯದರ್ಶಿ ಸೋಪಾನ್‌ ಮಾರೆ ಅವರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

2003ರಲ್ಲಿ ರಾಜಕುಮಾರ ಚಾರ್ಲ್ಸ್‌ ಮುಂಬಯಿಗೆ ಭೇಟಿಯಿತ್ತ ಸಮಯದಲ್ಲಿ ಮುಂಬಯಿಯ ಡಬ್ಬಾವಾಲರು ಒಂದುಗೂಡಿ ರಾಜಕುವರನಿಗೆ ಉಡುಗೊರೆಯನ್ನು ನೀಡಿದ್ದರು. ಡಬ್ಬಾವಾಲರ ಉಡುಗೊರೆಗೆ ರಾಜಕುಮಾರ ಚಾರ್ಲ್ಸ್‌ ಧನ್ಯವಾದ ಹೇಳಿ, ಮುಂಬಯಿಯನ್ನು ಈಗ ಕಳಕಳಿಯಿಂದ ನೆನಪಿಸಿಕೊಂಡಿದ್ದಾರೆ. ಮೇಡ್ಗೆ ಮತ್ತು ಮಾರೆ ಅವರಿಗೆ ಬ್ರಿಟಿಷ್‌ ಹೈಕಮಿಷನ್‌ ವೀಸಾ ಮತ್ತು ಟಿಕೇಟಿನ ವ್ಯವಸ್ಥೆ ಮಾಡಿದೆ. ಲಂಡನ್ನಿನಲ್ಲಿರುವ ಹಿಲ್ಟನ್‌ಪಂಚತಾರಾ ಹೋಟೆಲಿನಲ್ಲಿ ಎರಡು ದಿನಗಳ ವಸತಿಯನ್ನೂ ವ್ಯವಸ್ಥೆ ಮಾಡಲಾಗಿದೆ.

ಎರಡು ವರುಷಗಳ ಹಿಂದೆ ಆದರದ ಉಡುಗೊರೆ ಪಡೆದು ಇಂಗ್ಲೆಂಡಿಗೆ ಮರಳಿದ್ದ ಚಾರ್ಲ್ಸ್‌, ಡಬ್ಬಾವಾಲಗಳನ್ನು ಮರೆಯದೇ ಏಪ್ರಿಲ್‌ 9 ರಂದು ನಡೆಯುವ ತನ್ನ ಮದುವೆಗೆ ಕರೆಯೋಲೆಯನ್ನು ಬ್ರಿಟಿಷ್‌ ಹೈಕಮಿಷನ್‌ ಮೂಲಕವಾಗಿ ಕಳುಹಿಸಿದ್ದು ನಿಜಕ್ಕೂ ಸಂತಸದ ಸಂಗತಿ.

ಮದುವೆಗೆ ಬರಿಗೈಯಲ್ಲಿ ಹೋಗುವುದೇ, ಉಡುಗೊರೆ ಬೇಡವೇ? ವರನಿಗೆ ಜುಬ್ಬಾ, ಪೈಜಾಮ, ಜರಿಯ ಪೇಟ, ಕೊಲ್ಹಾಪುರಿ ಚಪ್ಪಲಿ, ವಧುವಿಗೆ ಒಂಬತ್ತು ಮೊಳ(ನೌವ್ವಾರಿ ಸಾಡಿ) ರೇಷಿಮೆಯ ಸೀರೆಯನ್ನು ತೆಗೆದುಕೊಂಡು ಹೋಗಿದ್ದಾರೆ. ವಾಹ್‌, ಕ್ಯಾ ಗಿಫ್ಟ್‌ ಹೈ! ಸ್ಕರ್ಟ್‌ ಧರಿಸುವ ಕ್ಯಾಮಿಲಗೆ ಒಂಬತ್ತು ಮೊಳದ(ನೌವ್ವಾರಿ ಸಾಡಿ) ಸೀರೆ, ಸೂಟು ಬೂಟು ಧರಿಸುವ ರಾಜಕುವರನಿಗೆ ಜುಬ್ಬಾ, ಪೈಜಾಮ ಮತ್ತು ಕೊಲ್ಹಾಪುರಿ ಚಪ್ಪಲಿ ಇವೆಲ್ಲರ ಜೊತೆ ಶುಭಸಂಕೇತವಾಗಿ ಎಳ್ಳುಂಡೆಯನ್ನು ಸಹಾ ಡಬ್ಬಾವಾಲಗಳು ಪ್ರೀತಿಯಿಂದ ಕೊಂಡೊಯ್ದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prince Charles has invited Mumbai dubbawalas for his marriage. Special report by Vani Ramdas.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more